ಪುತ್ತೂರು: ಶಾಸಕರ ವಾಹನಕ್ಕೆ ಅಡ್ಡಗಟ್ಟಿ ಗಲಭೆ ಸೃಷ್ಠಿಸಿದ ಘಟನೆ ಪುತ್ತೂರಿನ ತಾರಿಗುಡ್ಡೆ ಯಲ್ಲಿ ಅ.31 ರಂದು ನಡೆದಿದ್ದು,ಈ ಘಟನೆ ಬಗ್ಗೆ ಮಾಹಿತಿ ನೀಡಿದ ನಗರ ಮಂಡಲ ಅಧ್ಯಕ್ಷ ಜಗನ್ನಿವಾಸ್ ರಾವ್ ರವರು ಶಾಸಕರ ಬಳಿ ಅವರು ಕ್ಷಮೆ ಯಾಚಿಸಿದ್ದು, ಈ ಪ್ರಕರಣವನ್ನು ಮುಂದುವರಿಸದೆ ಕೈ ಬಿಡಲಾಗಿದೆ ಎಂದರು.
ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಹಾಕುವ ಕಾರ್ಯಕ್ರಮಕ್ಕಾಗಿ ಕೇಪುಳು ತಾರಿಗುಡ್ಡೆ ಮಾರ್ಗವಾಗಿ ಬೂತ್ 138 ರ ಅಧ್ಯಕ್ಷರ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಮ್ಮದು ಬೇಡಿಕೆ ಎಂದು ಹೇಳಿ ಶಾಸಕರ ಕಾರ್ ಅನ್ನು ತಡೆದು ನಿಲ್ಲಿಸಿದ್ದು, ಶಾಸಕರು ಕಾರಿನಿಂದಲೇ ಏನು ಆಗಬೇಕು ಎಂದು ಕೇಳಿದಾಗ, ತುಂಬಾ ಸಮಯದಿಂದ ರಸ್ತೆ ಅಭಿವೃದ್ಧಿಯಾಗಲಿಲ್ಲ ಎಂಬ ಬೇಡಿಕೆಯನ್ನಿಟ್ಟಿದ್ದು,ಈ ಸಂದರ್ಭದಲ್ಲಿ ಶಾಸಕರು ನಾನು ಮಾಡಿಸುತ್ತೇನೆ, ಈಗಾಗಲೇ ಹಲವು ಕಡೆಗಳಲ್ಲಿ ಮಾಡಿಸಿದ್ದೇನೆ. ಅನುದಾನಗಳು ಬರಬೇಕಷ್ಟೇ ಎಂದು ಹೇಳಿದರು.
ಆ ಸಂದರ್ಭದಲ್ಲಿ ಗಂಡ, ಹೆಂಡತಿ ಮತ್ತು ಇಬ್ಬರು ಯುವಕರು ತುಂಬಾ ಜೋರಾಗಿ ಶಾಸಕರಿಗೆ ಅಗೌರವ ತರುವ ರೀತಿಯಲ್ಲಿ ವರ್ತಿಸಿದ್ದು, ಆಗ ನಾನು ಅವರಲ್ಲಿ ಅಭಿವೃದ್ಧಿ ಆಗಬೇಕಾದುದು ಸತ್ಯವೇ ಆದರೇ ಶಾಸಕರು ಈಗಾಗಲೇ ಪುತ್ತೂರಿನಲ್ಲಿ 625 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಮಾಡುತ್ತಾ ಇದ್ದಾರೆ, ಇನ್ನೂ 1.5 ವರ್ಷದಲ್ಲಿ ನಿಮ್ಮ ಬೇಡಿಕೆಯನ್ನು ಈಡೇರಿಸುತ್ತಾರೆ. ನೀವು ಕೇಳುವ ರೀತಿಯಲ್ಲಿ ಕೇಳಿ ಮನವಿ ಕೊಡಿ ಖಂಡಿತಾ ಮಾಡಿ ಕೊಡುತ್ತೇವೆ ಎಂದು ಹೇಳಿದೆ. ಆದರೂ ಅವರು ಶಾಸಕರಿಗೆ ಏಕವಚನದಲ್ಲಿ ಮಾತನಾಡಿದರು. ಆಗ ಶಾಸಕರು ನಾವು ಮಾತನಾಡುವುದು ಬೇಡ, ಹೊರಡೋಣ ಎಂದಿದ್ದು, ಈ ಸಂದರ್ಭದಲ್ಲಿ ನೀವು ಮತ್ತೇ ಇದೇ ದಾರಿಯಲ್ಲಿ ಬರ್ತಿರಲ್ಲ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದರು.
ತಕ್ಷಣ ನಾವು ನಗರ ಠಾಣೆ ಎಸ್.ಐ ದೂರು ನೀಡಿದ್ದು, ಶಾಸಕರಿಗೆ ರಕ್ಷಣೆ ನೀಡಬೇಕು. ಕಾರ್ಯಕ್ರಮ ನಡೆಯುತ್ತಿದೆ ಅವರಿಗೆ ಯಾವುದೇ ರೀತಿಯ ಅಗೌರವಾಗಬಾರದು ಎಂದು ವಿನಂತಿಸಿದ್ವಿ ಎಂದರು.
ನಂತರದ ಬೆಳವಣಿಗೆಯಲ್ಲಿ ಪೊಲೀಸರು ಬಂದು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ಮತ್ತೇ ನಾವು ಠಾಣೆಗೆ ತೆರಳಿದ್ದು, ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಯವರು ಮತ್ತು ಹಲವಾರು ಮುಖಂಡರಿದದ್ದು, ಮಕ್ಕಳ ಮುಂದಿನ ಭವಿಷ್ಯದ ಉದ್ದೇಶದಿಂದ ದೂರನ್ನು ಹಿಂಪಡೆಯಬೇಕು ಎಂದು ಹೇಳಿದರು.
ನಮ್ಮ ಉದ್ದೇಶ ಶಾಸಕರಿಗೇ ಯಾವುದೇ ಅಗೌರವವಾಗಬಾರದು ಎಂಬುದು. ಯಾವುದೇ ಮನವಿ ನೀಡಬೇಕು ಎಂದರೆ ಅದಕ್ಕೆ ಒಂದು ಸೂಕ್ತ ಮಾರ್ಗವಿದೆ. ಶಾಸಕರ ಸ್ಥಾನಕ್ಕೇ ಒಂದು ಗೌರವಿದೆ ಅವರನ್ನು ದಾರಿಯಲ್ಲಿ ಅಡ್ಡ ಹಾಕಿ ಜೋರು ಮಾಡಿ ಕೇಳುವಂತದ್ದು ಸಭ್ಯತೆಯಲ್ಲ. ಶಾಸಕರ ಬಳಿ ಕ್ಷಮೆಯಾಚಿಸುತ್ತೇವೆ ಅವರ ಭವಿಷ್ಯದ ದೃಷ್ಟಿಯಿಂದ ಪ್ರಕರಣವನ್ನು ರಾಜಿಯಲ್ಲಿ ಬಿಡಬೇಕು ಎಂದರು, ಆಗ ನಾನು ಶಾಸಕರಲ್ಲಿ ನಿವೇದನೆ ಮಾಡಿದಾಗ ಶಾಸಕರು ನಮಗೆ ಯಾರ ಬಗ್ಗೆಯೂ ದುರುದ್ದೇಶವಿಲ್ಲ ಎಂದರು. ಈ ಬಗ್ಗೆ ಅವರು ಶಾಸಕರಲ್ಲಿ ಕ್ಷಮೆಯಾಚಿಸಿದ್ದು, ಈ ಪ್ರಕರಣವನ್ನು ಕೈ ಬಿಡಲಾಗಿದೆ ಎಂದರು.