ಮಂಗಳೂರು: ತಮ್ಮ ಕಾಮ ತೃಷೆ ಪೂರೈಸಲು ಎಂಟರ ಹರೆಯದ ಬಾಲಕಿಯ ಮೇಲೆ ಎರಗಿದ ಮೂವರು ಕೀಚಕರು ಆಕೆಯನ್ನು ಅತ್ಯಾಚಾರಗೈದು ಬಳಿಕ ಕತ್ತು ಹಿಸುಕಿ ಕೊಲೆ ಮಾಡಿ ಮೋರಿಯಲ್ಲಿ ಎಸೆದು ಹೋದ ಪೈಶಾಚಿಕ ಕೃತ್ಯ ಮೂರು ದಿನಗಳ ಹಿಂದೆ ಮಂಗಳೂರಿನ ರಾಜ್ ಟೈಲ್ಸ್ ಪ್ಯಾಕ್ಟರಿಯ ಅವರಣದಲ್ಲಿ ನಡೆದಿದೆ.
ಈ ಹೇಯ ಕೃತ್ಯದ ತನಿಖೆ ನಡೆಸಿದ ಮಂಗಳೂರು ಪೊಲೀಸರು ಇದು ಮದ್ಯಪ್ರದೇಶ ಹಾಗೂ ಜಾರ್ಖಂಡ್ ರಾಜ್ಯದಿಂದ ದ.ಕ. ಜಿಲ್ಲೆಗೆ ಕೆಲಸಕ್ಕೆಂದು ಬಂದ ಕಾಮುಕರ ತಂಡದ ಕೃತ್ಯ ಎಂದು ಪತ್ತೆ ಹಚ್ಚಿದ್ದು, ಕೃತ್ಯದಲ್ಲಿ ನೇರ ಭಾಗಿಯಾದ ಮೂವರನ್ನು ಹಾಗೂ ದುಷ್ಕೃತ್ಯಕ್ಕೆ ನೆರವಾದ ಓರ್ವನನ್ನು ಬಂಧಿಸಿದ್ದಾರೆ.
ಮಧ್ಯಪ್ರದೇಶ ಜಿಲ್ಲೆಯ ಪನ್ನಾ ಜಿಲ್ಲೆಯ 21 ರ ಹರೆಯದ ಜಯ್ ಸಿಂಗ್ (ಎ 1 )ಆರೋಪಿಯಾಗಿದ್ದು, ಮಧ್ಯಪ್ರದೇಶ ಜಿಲ್ಲೆಯ ಪನ್ನಾ ಜಿಲ್ಲೆಯ 20 ವರ್ಷ ಪ್ರಾಯದ ಇಬ್ಬರು ಯುವಕರು ಕ್ರಮವಾಗಿ ಮುಕೇಶ್ ಸಿಂಗ್ (ಎ2 ) ಮತ್ತು ಮುನೀಮ್ ಸಿಂಗ್ (ಎ4) ಆರೋಪಿಗಳಾಗಿದ್ದಾರೆ. ಜಾರ್ಖಂಡ್ ರಾಜ್ಯದ ರಾಂಚಿ ಜಿಲ್ಲೆಯ 33ರ ಹರೆಯದ ಯುವಕ ಮನೀಶ್ ತಿರ್ಕಿ ಎ3 ಆರೋಪಿಯಾಗಿದ್ದಾನೆ.
ಜಯ್ ಸಿಂಗ್, ಮುಕೇಶ್ ಸಿಂಗ್ ಹಾಗೂ ಮನೀಶ್ ತಿರ್ಕಿ ಪರಾರಿಯಲ್ಲಿರುವ ರಾಜ್ ಟೈಲ್ಸ್ ಫ್ಯಾಕ್ಟರಿಯ ಕೂಲಿ ಕಾರ್ಮಿಕರಾಗಿದ್ದರೆ, ಮುನೀಮ್ ಸಿಂಗ್ (20) ಪುತ್ತೂರಿನಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ . ಆರೋಪಿಗಳ ಪೈಕಿ ಈತ ಬಾಲಕಿಯ ಅತ್ಯಾಚಾರಗೆಯ್ಯುವ ಮೊದಲೇ ಬಾಲಕಿ ಮೃತಪಟ್ಟಿದ್ದಳು . ಉಳಿದ ಮೂವರು ಪೈಶಾಚಿಕವಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು.
ಆರೋಪಿಗಳ ವಿರುದ್ದ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ. ಹಾಗೂ ಐಪಿಸಿ ಕಲಂ 376 ಹಾಗೂ 302ರಂತೆ ಪ್ರಕರಣ ದಾಖಲಾಗಿದೆ.
ತನ್ನ ಸಹೋದರ ಸಹೋದರಿಯರ ಜೊತೆ ಆಟವಾಡುತ್ತಿದ್ದ ಕಂದಮ್ಮನನ್ನು ಅಪಹರಿಸಿ, ಹತ್ತಿರದ ಕಾರ್ಖಾನೆ ಸಮೀಪ ಅತ್ಯಾಚಾರ ಎಸಗಿರುವುದು ತನಿಖೆಯಿಂದ ಬಹಿರಂಗವಾಗಿದೆ.