ಪುತ್ತೂರು : ವಿಧ ವಿಧ ವಿನ್ಯಾಸದ ಪಂಚೆಗಳು, ಅತ್ಯುತ್ತಮ ಗುಣಮಟ್ಟ , ಅತ್ಯುತ್ತಮ ಸೇವೆ, ಮಿತದರದಲ್ಲಿ ಶ್ವೇತ ಶುಭ್ರ ಬಣ್ಣದ ಕಾಟನ್ ಧೋತಿಗಳು ನೂತನ ಮಳಿಗೆಯಲ್ಲಿ ಲಭ್ಯ.
ಪುತ್ತೂರಿನ ಎಳ್ಮುಡಿ ಮುಖ್ಯರಸ್ತೆಯಲ್ಲಿರುವ ಪ್ರೊವಿಡೆನ್ಸ್ ಪ್ಲಾಝಾದಲ್ಲಿ ನಿರ್ಮಾಣಗೊಂಡಿರುವ ರಾಮ್ ರಾಜ್ ಕಾಟನ್ ಪಂಚೆ ಹಾಗೂ ಧೋತಿಗಳ ಮಳಿಗೆಯು ಮಾ. 3ರಂದು ಶುಭಾರಂಭಗೊಳ್ಳಲಿದೆ.
ಕಾರ್ಯಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಲಿದ್ದು, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಬಲ್ಲಮಜಲು ಉದ್ಯಮಿ ಶಿವರಾಮ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.