ಆದರ್ಶ್ ಶೆಟ್ಟಿ ಉಪ್ಪಿನಂಗಡಿ
ಬಿಜೆಪಿಯ ಭದ್ರಕೋಟೆ ಪುತ್ತೂರು ವಿಧಾನಸಭಾ ಕ್ಷೇತ್ರ ಅತಿ ಹೆಚ್ಚು ಗ್ರಾಮೀಣ ಪ್ರದೇಶಗಳನ್ನು ಹೊಂದಿರುವ ಕ್ಷೇತ್ರ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಬೇಡಿಕೆಯ ಜತೆ ಕೃಷಿ ಚಟುವಟಿಕೆಗಳಿಗೆ ಉತ್ತೇಜನದಂತಹ ಅವಶ್ಯಕತೆ, ಆಗ್ರಹಗಳು ಜನಸಾಮಾನ್ಯರಲ್ಲಿರುತ್ತದೆ.ಪ್ರಮುಖವಾಗಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನೊಳಗೊಂಡ ಪ್ರದೇಶದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ಸೇತುವೆಯಿದೆ.ಅವೆಂದರೆ ಮಂಗಳೂರು-ಬೆಂಗಳೂರು ಮತ್ತು ಮಂಗಳೂರು-ಮೈಸೂರು.ಪುತ್ತೂರು ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾದ ಸಂಜೀವ ಮಠಂದೂರುರವರ ಎರೆಡುವರೆ ವರ್ಷದ ಅವಧಿಯಲ್ಲಿ ಪ್ರಮುಖವಾಗಿ ಪುತ್ತೂರು ಬಳಿಕ ಅತಿ ದೊಡ್ಡ ನಗರವಾದ ಉಪ್ಪಿನಂಗಡಿಯನ್ನು ಸಂಪರ್ಕಿಸುವ ಪುತ್ತೂರು ಉಪ್ಪಿನಂಗಡಿ ರಸ್ತೆಯು ಮೇಲ್ದರ್ಜೆಗೇರಿ ಚತುಷ್ಪಥ ರಸ್ತೆಯಾಗಿ ಮಾರ್ಪಟ್ಟು ಇದೀಗ ಲೋಕಾರ್ಪಣೆಗೆ ಸಿದ್ಧಗೊಂಡಿದೆ.
ಈ ರಸ್ತೆಯ ಅಗಲೀಕರಣದಿಂದ ಪ್ರಮುಖವಾಗಿ ಪುತ್ತೂರು ಉಪ್ಪಿನಂಗಡಿ ಸಂಚಾರದ ಅವಧಿಯು ಅತಿ ಕಡಿಮೆ ತಾಸಿನಲ್ಲಿ ಸಂಚರಿಸಬಹುದಾಗಿದೆ.ಜತೆಗೆ ಕ್ಷೇತ್ರದ 44 ಗ್ರಾಮಗಳಲ್ಲಿ ಬಹುತೇಕ ಒಳರಸ್ತೆಗಳ ಡಾಮರೀಕರಣ,ಕಾಂಕ್ರೀಟೀಕರಣಗೊಂಡು ಸಾಕಷ್ಟು ರಸ್ತೆಗಳ ಅಭಿವೃದ್ಧಿಗೆ ಸಂಜೀವ ಮಠಂದೂರುರವರ ಮುತುವರ್ಜಿಯಲ್ಲಿ ಅನುದಾನಗಳು ಬಿಡುಗಡೆಗೊಂಡಿವೆ.ಇನ್ನುಳಿದಂತೆ ಕುಡಿಯುವ ನೀರಿನ ಯೋಜನೆ, ಸೇತುವೆಗಳ ನಿರ್ಮಾಣ,ವಿದ್ಯುತ್ ಸಂಪರ್ಕ, ಸರಬರಾಜಿನಂತಹ ಮೂಲಭೂತ ಸೌಕರ್ಯಗಳಿಗೂ ಹೆಚ್ಚಿನ ಆದ್ಯತೆಗಳನ್ನು ಶಾಸಕರು ನೀಡಿದ್ದಾರೆ.ಜತೆಗೆ ವಾಸಕ್ಕೆ ಯೋಗ್ಯವಾದ ಸೂರಿಲ್ಲದ ಬಡಜನರಿಗಾಗಿ ಬಸವ ವಸತಿ ಯೋಜನೆಯಡಿ ಹಲವಾರು ಮನೆಗಳ ಮಂಜೂರು, ನಿವೇಶನವಿಲ್ಲದ ಸಾವಿರಾರು ಮಂದಿಗೆ 94 ಸಿ ಮತ್ತು 94 ಸಿಸಿ ಯೋಜನೆಯಡಿಯಲ್ಲಿ ಹಕ್ಕು ಪತ್ರಗಳ ವಿತರಣೆ, ಕನ್ನಡ ಮಾಧ್ಯಮ ಶಾಲೆಗಳ ಉನ್ನತೀಕರಣಕ್ಕಾಗಿ ಶಾಲೆಗಳ ಕೊಠಡಿಗಳಿಗೆ ಅನುದಾನ ಮಂಜೂರು, ಅಟಲ್ ಟಿಂಕರಿಂಗ್ ಲ್ಯಾಬ್,ಹಲವಾರು ಪ್ರಮುಖ ದೇವಾಲಯಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆ, ಒಳರಸ್ತೆಗಳಿಗೆ ಕೋಟ್ಯಾಂತರ ರೂಪಾಯಿ ಅನುದಾನಗಳು,ಪ್ರಮುಖ ಭಜನಾ ಮಂದಿರ, ದೇವಾಲಯಗಳ ಜೀರ್ಣೋದ್ಧಾರಗಳಿಗೆ ಅನುದಾನ, ದೇವಾಲಯಗಳ ತಡೆಗೋಡೆಗೆ ಅನುದಾನ, ಕೃಷಿ ಚಟುವಟಿಕೆಗಳಿಗೆ ಪೂರಕವಾಗುವ ಅಂತರ್ಜಲ ಸಂರಕ್ಷಣೆಯ ದೃಷ್ಟಿಯಿಂದ ಹಲವಾರು ಕಿಂಡಿ ಅಣೆಕಟ್ಟುಗಳ ನಿರ್ಮಾಣಗಳು, ಪರಿಶಿಷ್ಟ ಪಂಗಡ, ವರ್ಗಕ್ಕೆ ಸೇರಿದ ಕಾಲನಿಗಳ ಸಂಪರ್ಕ ರಸ್ತೆಗಳಿಗೆ ಅನುದಾನ, ಸರಕಾರದ ಸವಲತ್ತುಗಳ ವಿತರಣೆ, ಅಂಗವಿಕಲ ನಿರ್ಗತಿಕರಿಗೆ ವೀಲ್ ಚೇರ್ ವಿತರಣೆ, ಸರಕಾರದ ಸಹಾಯಧನ,ಸವಲತ್ತುಗಳ ವಿತರಣೆ ಶಾಸಕ ಸಂಜೀವ ಮಠಂದೂರುರವರ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿಯಂತಿದೆ.
ಇನ್ನು ಸರಕಾರಿ ಆಸ್ಪತ್ರೆಗಳಿಗೆ ಸುಸಜ್ಜಿತ ಕಟ್ಟಡ, ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿರುವುದು,ಕೃಷಿ ಚಟುವಟಿಕೆಗಳಿಗೆ ಉಂಟಾದ ಹಾನಿ ಸಂಬಂಧಿಸಿದ ವಿಚಾರಗಳಿಗೆ ಓರ್ವ ಕೃಷಿಕನಾಗಿ ಸಹಾಯಧನ ವಿತರಣೆ ಹೀಗೆ ಹತ್ತು ಹಲವು ಸಾಧನೆಗಳು ಸಂಜೀವ ಮಠಂದೂರುರವರ ಮುಡಿಗೇರಿದೆ.ಭಾರತೀಯ ಜನತಾ ಪಾರ್ಟಿಯ ತಳಮಟ್ಟದ ಕಾರ್ಯಕರ್ತನಾಗಿ,ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ, ಎರಡು ಅವಧಿಗೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಕೃಷಿಕ ಸಮಾಜದ ಅಧ್ಯಕ್ಷರಾಗಿ, ಕ್ಯಾಂಪ್ಕೋ ನಿರ್ದೇಶಕರಾಗಿ, ಪಕ್ಷದ ಜಿಲ್ಲಾಧ್ಯಕ್ಷರಾಗಿ ತನ್ನ ಅವಧಿಯಲ್ಲಿ ಪಕ್ಷದ ಏಳು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ತಾನು ಮಾಡಿದ ಕೆಲಸ ಕಾರ್ಯಗಳಲ್ಲಿ ಸದಾ ಪ್ರಚಾರವನ್ನು ಬಯಸದ ಸೈಲೆಂಟ್ ವರ್ಕರ್ ‘ಸಂಜೀವಣ್ಣ’ನೆಂದೇ ಗುರುತಿಸಲ್ಪಡುವ ಶಾಸಕರು ಎಲ್ಲಾ ಧರ್ಮದ ಜನರ ಪ್ರೀತಿಗೆ ಪಾತ್ರರಾಗಿರುವುದು ವಿಶೇಷ.ಇದೀಗ ರಾಜ್ಯ ಬಿಜೆಪಿ ಸಹಕಾರಿ ಪ್ರಕೋಷ್ಠದ ಸಂಚಾಲಕರೂ ಆಗಿರುವ ಸಂಜೀವ ಮಠಂದೂರುರವರು ಪಕ್ಷದ ಬೆಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪ್ರಭಾರಿಯಾಗಿ ಉಸ್ತುವಾರಿ ಹೊತ್ತು ಕಾರ್ಯನಿರ್ವಹಿಸುತ್ತಿದ್ದಾರೆ.ಪಕ್ಷದ ಶಿಸ್ತಿನ ಸಿಪಾಯಿಯಾಗಿ ಸಂಘದ ಸ್ವಯಂಸೇವಕನಾಗಿ,ಸಮಯ ಪಾಲನೆ ಸಿದ್ದಾಂತದಲ್ಲಿ ಎಂದೂ ರಾಜಿ ಮಾಡಿಕೊಳ್ಳದ ವ್ಯಕ್ತಿ ಸಂಜೀವ ಮಠಂದೂರು.
ತನ್ನ ಇನ್ನು ಎರಡುವರೆ ವರ್ಷಗಳ ಅವಧಿಯಲ್ಲಿ ಹಲವಾರು ಯೋಜನೆಗಳನ್ನು ಸಿದ್ಧಪಡಿಸಿ ನೀಳ ನಕಾಶೆ ರಚಿಸಿರುವ ಶಾಸಕರು ಗ್ರಾಮೀಣ ಭಾಗದ ಜನರಿಗೆ ದೂರದ ಮಂಗಳೂರನ್ನು ಸಂಪರ್ಕಿಸಲು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಎಸ್ಪಿ ಕಛೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಾರೆ.ಈ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು,ಶೀಘ್ರವಾಗಿ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿದ್ದು,ಜತೆಗೆ ಪುತ್ತೂರನ್ನು ಜಿಲ್ಲಾ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ತನ್ನ ಪ್ರಯತ್ನ ಮುಂದುವರಿಸಿದ್ದಾರೆ.