ಪುತ್ತೂರು ಎಪಿಎಂಸಿ ರಸ್ತೆ ರೈಲ್ವೇ ಅಂಡರ್ ಪಾಸ್ ಕಾಮಗಾರಿಯ ಯೋಜನೆಯು ಕಾರ್ಯರೂಪಕ್ಕೆ ತರಲು ಕೊನೆಯ ಹಂತದಲ್ಲಿದ್ದು ಈ ಕುರಿತು ಎಚ್.ಎಂ.ಆರ್.ಡಿ.ಸಿ.ಎಲ್ ಇಲಾಖೆಯ ಆಡಳಿತ ನಿರ್ದೇಶಕರಾದ(ಎಂ.ಡಿ.) ಶ್ರೀ ಅಮಿತ್ ಗರ್ಗ್ ಅವರ ಜೊತೆ ಚರ್ಚಿಸಿ ಅತೀ ಶೀಘ್ರದಲ್ಲಿ ಯೋಜನೆಯನ್ನು ಜಾರಿಗೆ ಮಾಡುವಂತೆ ಮಾನ್ಯ ಶಾಸಕರಾದ *ಶ್ರೀ ಸಂಜೀವ ಮಠಂದೂರು* ರವರು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಅಮಿತ್ ಗರ್ಗ್ ಅವರು ಆದಷ್ಟು ಬೇಗ ಇಲಾಖೆಯ ಸಭೆಯನ್ನು ಕರೆದು ತಕ್ಷಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಪುತ್ತೂರು ಎಪಿಎಂಸಿ ಅಧ್ಯಕ್ಷರಾದ ಶ್ರೀ ದಿನೇಶ್ ಮೆದು ಅವರು ಉಪಸ್ಥಿತರಿದ್ದರು.