ಪುತ್ತೂರು : ಸದಾ ಹೊಸತನವನ್ನು ಪುತ್ತೂರಿನ ಕ್ರೀಡಾ ಪ್ರೇಕ್ಷಕರಿಗೆ ಪರಿಚಯಿಸುತ್ತಾ ಬಂದಿರುವ ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲಾರ್ ಸಾಫ್ಟ್ ಡ್ರಿಂಕ್ಸ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ದಿ|ಸುನೀಲ್ ಮಸ್ಕರೇನಸ್ ಮತ್ತು ದಿ| ವಿಕ್ರಮ್ ಭಟ್ ಸ್ಮರಣಾರ್ಥ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಓವರ್ಆರ್ಮ್ ಕ್ರಿಕೆಟ್ ಪಂದ್ಯಾಟ “ಸಿಝ್ಲಾರ್ ಟ್ರೋಫಿ -2021″ ಮಾರ್ಚ್ 19/20/21 ರಂದು ಸಂತ ಫಿಲೋಮಿನಾ ಕಾಲೇಜಿನ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಪ್ರಥಮ ಬಹುಮಾನ ರೂ.2,00,000 ಹಾಗೂ ಸಿಝ್ಲಾರ್ ಟ್ರೋಫಿ ದ್ವಿತೀಯ ಬಹುಮಾನ ರೂ.1,00,000 ಹಾಗೂ ಸಿಝ್ಲಾರ್ ಟ್ರೋಫಿ ಮತ್ತು ಸರಣಿ ಶ್ರೇಷ್ಟ ಆಟಗಾರನಿಗೆ ಅತ್ಯಾಕರ್ಷಕ ದ್ವಿಚಕ್ರ ವಾಹನ ಪಂದ್ಯಾಟದ ಘನತೆಯನ್ನು ಇಮ್ಮಡಿಗೊಳಿಸಿದೆ.
ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಇವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀವಂದರ್ ಜೈನ್ ಅಧ್ಯಕ್ಷರು, ನಗರ ಸಭೆ ಪುತ್ತೂರು ಇವರು ವಹಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ : ರೂಪಾ ಶೆಟ್ಟಿ ಪೌರಾಯುಕ್ತರು ಪುತ್ತೂರು ನಗರಸಭಾ, ರೆ.ಫಾ. ಲಾರೆನ್ಸ್ ಮಸ್ಕರೇನಸ್ ಸಂಚಾಲಕರು ಮಾಯಿದೇ ದೇವುಸ್ ಸಮೂಹ ಶಿಕ್ಷಣ ಸಂಸ್ಥೆ ಪುತ್ತೂರು, ಪ್ರೊ.ಲಿಯೋ ನೊರೊನ್ಹಾ ಪ್ರಾಂಶುಪಾಲರು, ಸಂತ ಫಿಲೋಮಿನಾ ಕಾಲೇಜು ಪುತ್ತೂರು, ರೆ ಫಾ ಆ್ಯಂಟನಿ ಪ್ರಕಾಶ್ ಮೊಂತೇರೋ ಉಪನ್ಯಾಸಕರು ಸಂತ ಫಿಲೋಮಿನಾ ಕಾಲೇಜು ಪುತ್ತೂರು,ಎನ್ ಸುಧಾಕರ್ ಶೆಟ್ಟಿ ಅಧ್ಯಕ್ಷರು ಪುತ್ತೂರು ದೇವತಾ ಸಮಿತಿ, ತಿಮ್ಮಪ್ಪ ನಾಯ್ಕ್ ಪುತ್ತೂರು ಮಹಿಳಾ ಠಾಣಾ ಇನ್ಸ್ ಸ್ಪೆಕ್ಟರ್ , ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾಜಿ ಅಧ್ಯಕ್ಷರು ಪುತ್ತೂರು ನಗರಸಭೆ ,ರಾಮ ನಾಯ್ಕ್ ಸಬ್ ಇನ್ಸ್ ಸ್ಪೆಕ್ಟರ್ ನಗರಸಂಚಾರಿ ಠಾಣೆ, ರಿಯಾಝ್ ಪರ್ಲಡ್ಕ ನಗರಸಭೆ ಸದಸ್ಯರು, ಬಾಲಚಂದ್ರ ಕೆ ನಗರಸಭೆ ಸದಸ್ಯರು, ಗೋಪಾಲಕೃಷ್ಣ ಭಟ್ ಸಾಮೆತ್ತಡ್ಕ, ಮನೋಹರ್ ಕಲ್ಲಾರೆ, ಮಧು ಹೆಚ್, ಬೆಟ್ಟ ಈಶ್ವರ ಭಟ್, ಆನಂದ್ ಶೆಟ್ಟಿ, ಡಾ.ಶಾನೋನ್ ಮಸ್ಕರೇನಸ್, ಎಲ್ಯಾಸ್ ಪಿಂಟೋ ದೈಹಿಕ ಶಿಕ್ಷಣ ನಿರ್ದೇಶಕರು ಸಂತ ಫಿಲೋಮಿನಾ ಕಾಲೇಜು ಪುತ್ತೂರು, ಕೃಷ್ಣಪ್ರಸಾದ್ ರೈ ವಕೀಲರು ಪುತ್ತೂರು ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮ: ಮಾ.೨೧ ರಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲುರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಸಹಾಯಕ ಆಯುಕ್ತ ಡಾ|ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು, ಪುತ್ತೂರು ವಿಭಾಗದ ಡಿವೈಎಸ್‌ಪಿ ಡಾ|ಗಾನ ಪಿ.ಕುಮಾರ್, ಬೆಂಗಳೂರು ಕೆ.ಆರ್ ಪುರಂನ ತಹಶೀಲ್ದಾರ್ ಅಜಿತ್ ರೈ, ಅಖಿಲ ಭಾರತ್ ಇಂಟಕ್‌ನ ಕಾರ್ಯದರ್ಶಿ ರಾಕೇಶ್ ಮಲ್ಲಿ, ಮಂಗಳೂರು ಸಾಮಾಜಿಕ ಅರಣ್ಯ ಇಲಾಖೆಯ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ಪುತ್ತೂರು ಅರಣ್ಯ ಇಲಾಖೆಯ ಎಸಿಎಫ್ ಕಾರ್ಯಪ್ಪ, ಉದ್ಯಮಿ ಉಮೇಶ್ ನಾಡಾಜೆ ಮಂಗಳೂರು, ಉದ್ಯಮಿ ಮನ್ಮಿತ್ ರೈ ಓಲೆಮುಂಡೋವು ಬೆಂಗಳೂರು, ಮೈಸೂರ್ ಸೋಶಿಯಲ್ಸ್ ಮಾಲಕ ಹರ್ಷ ಮೇಲಾಂಟ, ಉದ್ಯಮಿ ಚೇತನ್ ಗೌಡ ಬೆಂಗಳೂರು, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಕಮ್ಮಾಡಿ ಗ್ರೂಪ್ಸ್‌ನ ಡಾ|ಅಶ್ರಫ್ ಕಮ್ಮಾಡಿ, ಉದ್ಯಮಿ ಶಿವರಾಂ ಆಳ್ವ ಪುತ್ತೂರು, ಪುತ್ತೂರು ಬಿಲ್ಲವ ಸಂಂಘದ ಅಧ್ಯಕ್ಷ ಜಯಂತ ನಡುಬೈಲು, ರಾಷ್ಟ್ರೀಯ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ, ಪುತ್ತೂರು ಪದ್ಮಶ್ರೀ ಗ್ರೂಪ್ಸ್‌ನ ಸೀತಾರಾಮ ರೈ, ಪುತ್ತೂರು ಕ್ಲಬ್ ಚೆಯರ್‌ಮ್ಯಾನ್ ಡಾ|ದೀಪಕ್ ರೈ, ಪ್ರಿಯದರ್ಶಿನಿ ಮಹಿಳಾ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷೆ ದಿವ್ಯಪ್ರಭ ಚಿಲ್ತಡ್ಕ, ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಗೌರವ ಆಹ್ವಾನಿತರಾಗಿ ಆರ್‌ಜಿಯುಎಚ್‌ಎಸ್ ಸೆನೆಟ್ ಸದಸ್ಯ ಡಾ.ಶರಣ್ ಶೆಟ್ಟಿ, ಉದ್ಯಮಿ ಸನ್ಮತ್ ಮೇಲಾಂಟ ಮಂಗಳೂರು, ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ರೈ, ಕಿರಣ್ ಎಂಟರ್‌ಪ್ರೈಸಸ್‌ನ ಕೇಶವ ಎಂ, ಪ್ರಸಾದ್ ಇಂಡಸ್ಟ್ರೀಸ್‌ನ ಶಿವಪ್ರಸಾದ್ ಶೆಟ್ಟಿ, ಉದ್ಯಮಿ ಗೌರವ್ ಶೆಟ್ಟಿ ಬೆಂಗಳೂರು, ಪುತ್ತೂರು ತಿರುಮಲ ಹೋಂಡಾದ ಅಖಿಲೇಶ್, ಉದ್ಯಮಿ ಸತೀಶ್ ಶೆಟ್ಟಿ ಕೆದಿಕಂಡೆಗುತ್ತು ಮಂಗಳೂರು, ಉದ್ಯಮಿ ಭವಿನ್ ಸಾವ್‌ಜಾನಿ, ಪೊಪ್ಯುಲರ್ ಇಂಡಸ್ಟ್ರೀಸ್‌ನ ನಾಗೇಂದ್ರ ಕಾಮತ್, ಜೆ.ಕೆ ಕನ್‌ಸ್ಟ್ರಕ್ಷನ್ಸ್‌ನ ಜಯಕುಮಾರ್ ಆರ್.ನಾಯರ್, ಕ್ಲಾಸ್ -1 ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಹರೀಶ್ ಕುಮಾರ್, ವಿಘ್ನೇಶ್ವರ ಇಂಡಸ್ಟ್ರೀಸ್‌ನ ಸುಧೀರ್ ಶೆಟ್ಟಿ, ಈಸ್ಟನ್ಸ್ ಗ್ರೂಪ್ಸ್‌ನ ಖಲಂದರ್, ಉದ್ಯಮಿ ಸುಜಿತ್ ಶೆಟ್ಟಿ ಮೈಸೂರು, ಸೌದಿ ಅರೇಬಿಯಾ ಇಂಟರ್‌ನ್ಯಾಷನಲ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಮಹಮದ್ ಕುಕ್ಕುವಳ್ಳಿ, ಶೇಟ್ ಇಲೆಕ್ಟ್ರಾನಿಕ್ಸ್‌ನ ರೂಪೇಶ್ ಶೇಟ್, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ರತನ್ ನಾಕ್ ಕರ್ನೂರು, ಟಿಂಬರ್ ಮರ್ಚಂಟ್ ಯೂಸುಫ್ ಗೌಸಿಯಾ, ಉದ್ಯಮಿ ಪ್ರವೀಣ್ ಶೆಟ್ಟಿ ಅಳಕೆಮಜಲು ಬೆಂಗಳೂರು, ಪುತ್ತೂರು ಪ್ರಾಪರ್ಟಿಸ್‌ನ ನಿತಿನ್ ಪಕ್ಕಳ, ಉದ್ಯಮಿ ಸಂದೀಪ್ ಶೆಟ್ಟಿ ಅರಿಯಡ್ಕ, ಬೆಂಗಳೂರು ಹೈಕೋರ್ಟ್ ವಕೀಲರಾದ ಪ್ರಕಾಶ್ ಶೆಟ್ಟಿ ಹಾಗೂ ಪ್ರೇಮ್‌ಪ್ರಸಾದ್ ಶೆಟ್ಟಿ, ಪಡೀಲು ಪ್ರಶಾಂತ್ ಎಂಟರ್‌ಪ್ರೈಸಸ್‌ನ ಪ್ರಶಾಂತ್ ಶೆಣೈರವರು ಭಾಗವಹಿಸಲಿದ್ದಾರೆ.
ಬಹುಮಾನ ವಿತರಣೆ:
ರಾತ್ರಿ ನಡೆಯುವ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಸಿಝ್ಲರ್ ಸಾಪ್ಟ್ ಡ್ರಿಂಕ್ಸ್‌ನ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿರವರು ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಉಪಸ್ಥಿತಿಯಾಗಿ ಸುಜಾತಾ ಬಾರ್ ಆಂಡ್ ರೆಸ್ಟೋರೆಂಟ್‌ನ ಸುಶಾಮ್ ಶೆಟ್ಟಿ, ಕಲ್ಲಾರೆ ಸನ್‌ಶೈನ್‌ನ ಸೂರಜ್ ನಾಯರ್, ನಗರಸಭಾ ಸದಸ್ಯ ಯೂಸುಫ್ ಡ್ರೀಮ್ಸ್, ಉದ್ಯಮಿ ಶಮ್ಮೂನ್ ಪರ್ಲಡ್ಕ, ಸಾಮೆತ್ತಡ್ಕ ಯುವಕ ಮಂಡಲದ ಅಧ್ಯಕ್ಷ ಶ್ರೀನಾಥ್ ಆಚಾರ್ಯ, ಗೌರವಾಧ್ಯಕ್ಷ ಸೂರಜ್ ಶೆಟ್ಟಿ, ಉದ್ಯಮಿ ರೋಶನ್ ರೆಬೆಲ್ಲೋ, ಉದ್ಯಮಿ ಸುಭಾಷ್‌ಚಂದ್ರ ರೈ ಬೆಂಗಳೂರು, ನ್ಯಾಯವಾದಿ ಕವನ್ ನಾಕ್, ಉದ್ಯಮಿ ಮಹಮ್ಮದ್ ಸೈಫ್ ಬೆಂಗಳೂರು, ಸುಧೀರ್ ಶೆಟ್ಟಿ ನೇಸರ ಕಂಪ, ಲಕ್ಷ್ಮಣ್ ಬಿ.ಸಂಪ್ಯ, ಉದ್ಯಮಿ ಆಶ್ರಯ್ ರೈ ಮಾದೋಡಿ, ಕಲ್ಲಾರೆ ನವಜೀವನ್ ಫ್ಲವರ್‍ಸ್‌ನ ಜೋನ್ ಪೀಟರ್ ಡಿ’ಸಿಲ್ವ, ಗ್ರಾಮ ಪಂಚಾಯತ್ ಸದಸ್ಯ ಶ್ರೀರಾಂ ಪಕ್ಕಳ, ಉದ್ಯಮಿ ಝಿಯಾದ್ ದರ್ಬೆ, ಗ್ರಾಮ ಪಂಚಾಯತ್ ಸದಸ್ಯ ಅವಿನಾಶ್ ಶೆಟ್ಟಿ, ಸಾಮೆತ್ತಡ್ಕ ಯುವಕ ಮಂಡಲದ ಮಾಜಿ ಅಧ್ಯಕ್ಷ ಸಿರಾಜ್ ಸಾಮೆತ್ತಡ್ಕ, ಮನು ಎಂ.ರೈ, ಇಮ್ರಾಜ್ ಬೊಳ್ವಾರು, ಹಾಫಿಲ್ ಕೂರ್ನಡ್ಕ, ಜೋಸ್ಲಿ ಕುಟಿನ್ಹಾ, ದಾವೂದ್ ಬನ್ನೂರು, ಅಝರ್ ಆಕರ್ಷಣ್, ಸುಧೀರ್ ಶೆಟ್ಟಿ ನೆಹರುನಗರ ರವರು ಭಾಗವಹಿಸಲಿದ್ದಾರೆ ಎಂದು ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಪ್ಟ್ ಡ್ರಿಂಕ್ಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
24+4+2+1=31 ಪಂದ್ಯಗಳು
ಒಟ್ಟು ೧೬ ಘಟಾನುಘಟಿ ತಂಡಗಳು ಈ ಪಂದ್ಯಾಕೂಟದಲ್ಲಿ ಭಾಗವಹಿಸಲಿದ್ದು, ಈ ೧೬ ತಂಡಗಳನ್ನು ಎ’,
ಬಿ’,ಸಿ’
,ಡಿ’ ಹೀಗೆ ನಾಲ್ಕು ವಿಭಾಗಗಳನ್ನು ಮಾಡಿ ಪ್ರತೀ ವಿಭಾಗದಲ್ಲಿ ೪ ತಂಡಗಳನ್ನು ಲೀಗ್ ಮಾದರಿಯಲ್ಲಿ ಆಡಿಸಲಾಗುತ್ತದೆ. ಪ್ರತೀ ವಿಭಾಗದಲ್ಲಿನ ಅಗ್ರ ಎರಡು ತಂಡಗಳು ಅಂದರೆ ನಾಲ್ಕು ವಿಭಾಗದ ೮ ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ತೇರ್ಗಡೆಗೊಳ್ಳುತ್ತದೆ. ಕ್ವಾರ್ಟರ್ ಫೈನಲಿನಲ್ಲಿ ೪ ಪಂದ್ಯಗಳನ್ನು ಆಡಲಾಗುತ್ತಿದ್ದು, ಇಲ್ಲಿ ವಿಜಯಿಯಾದ ೪ ತಂಡಗಳು ನೇರ ಸೆಮಿಫೈನಲಿಗೆ ಅರ್ಹತೆ ಪಡೆಯುತ್ತದೆ. ಸೆಮಿಫೈನಲಿನಲ್ಲಿ ನಾಲ್ಕು ತಂಡಗಳು ಕಾದಾಟ ನಡೆಸಿ, ಬಲಿಷ್ಟ ೨ ತಂಡಗಳು ಅಂತಿಮ ಪ್ರಶಸ್ತಿ ಸುತ್ತಿನ ಹಣಾಹಣಿಗೆ ಅರ್ಹತೆ ಪಡೆಯಲಿದೆ. ಹೀಗೆ ಒಟ್ಟು ೩೧ ಪಂದ್ಯಗಳನ್ನು ಆಡಿಸಲಾಗುತ್ತಿದೆ.
ವಿಶೇಷತೆಗಳು:
–ನೋ ಕಾಯಿನ್ ಟಾಸ್’,
ಬ್ಯಾಟ್ ಫ್ಲಿಪ್ ಟಾಸ್’ ಅಳವಡಿಕೆ
-ರಿಮೋಟ್ ಕಂಟ್ರೋಲ್ ಕಾರ್‌ನಿಂದ ಬಾಲ್‌ನ್ನು ಪಿಚ್‌ಗೆ ಕೊಂಡೊಯ್ಯಲಾಗುವುದು
-ಪ್ರತೀ ಪಂದ್ಯದಲ್ಲಿ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ನೀಡಲಾಗುತ್ತದೆ.
-೧೬ ತಂಡಗಳ ಆಟಗಾರರು ಸಂಘಟಕರು ಕೊಡಲ್ಪಡುವ ಜರ್ಸಿಯನ್ನು ಧರಿಸತಕ್ಕದ್ದು.
-ಆಡಲಾಗುವ ಇತ್ತಂಡ ಆಟಗಾರರ ತಂಡಕ್ಕೆ ಪ್ರತ್ಯೇಕ ಡಗೌಟ್
-ಕ್ರೀಸಿನ ಮಧ್ಯದಿಂದ ೫೨ಮೀ. ಉದ್ದದ ಬೌಂಡರಿ ಗೆರೆ
-ಪ್ರತ್ಯೇಕ ಸುಸಜ್ಜಿತ ಸಭಾ ವೇದಿಕೆ, ಅತಿಥಿಗಳ ವೇದಿಕೆ
-ಪಂದ್ಯಾಟವನ್ನು ಸವಿಯಲು ಪ್ರೇಕ್ಷಕರಿಗೆ ಗ್ಯಾಲರಿಯ ವ್ಯವಸ್ಥೆ.
-ಪಂದ್ಯಾಕೂಟದಲ್ಲಿ ಪವರ್‌ಫ್ಲೇ, ನೋಬಾಲ್ ಎಸೆತಕ್ಕೆ `ಫ್ರೀ ಹಿಟ್’
-ಪಂದ್ಯಾಟಗಳು ಬೆಳಿಗ್ಗೆ ೮ ಗಂಟೆಗೆ ಆರಂಭಗೊಂಡು ರಾತ್ರಿ ೧೨ ಗಂಟೆಗೆ ಮುಕ್ತಾಯ
ಪಂದ್ಯಾಟಕ್ಕೆ ಸ್ಟಾರ್ ಟಚ್ : ಮೂರು ದಿನಗಳಳ ಕಾಲ ನಡೆಯುವ ಹೊನಲು ಬೆಳಕಿನ ಓವರ್ ಆರ್ಮ್ ಪಂದ್ಯಾವಳಿಗೆ ಸ್ಟಾರ್ ಟಚ್ ಕೂಡಾ ದೊರೆಯಲಿದ್ದು ಅನೇಕ ಚಿತ್ರ ತಾರೆಯರು ಕ್ರಿಕೆಟ್ ಆಟಗಾರರು ಆಗಮಿಸಲಿದ್ದು ಪಂದ್ಯಾವಳಿಯ ಮೆರುಗನ್ನು ಹೆಚ್ಚಿಸಲಿದೆ.