ಜಮೈಕಾ: ಭಾರತ ಜಮೈಕಾಗೆ ಕೋವಿಡ್ ಲಸಿಕೆಗಳನ್ನು ರವಾನಿಸಿದ್ದು, ಜಮೈಕಾ ಮೂಲದ ವಿಂಡೀಸ್ ಕ್ರಿಕೆಟರ್ ಕ್ರಿಸ್ ಗೇಲ್ ಭಾರತಕ್ಕೆ ವಂದಿಸಿದ್ದಾರೆ. ಈಗಾಗಲೇ ವಿಶ್ವದ ಬೇರೆ ಬೇರೆ ದೇಶಗಳಿಗೆ ಭಾರತ ಲಸಿಕೆ ರವಾನಿಸಿದೆ. ಇದಕ್ಕಾಗಿ ದೇಶದ ಜನರಿಗೆ, ಗಣ್ಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಅಂತೆಯೇ ಜಮೈಕಾಗೆ ಲಸಿಕೆ ಕಳಿಸಿದ್ದಕ್ಕಾಗಿ ಕ್ರಿಸ್ ಗೇಲ್ ಭಾರತ ಸರ್ಕಾರ, ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಎಂದಿದ್ದಾರೆ. ವ್ಯಾಕ್ಸಿನ್ ಮೈತ್ರಿ ಯೋಜನೆಯಡಿ ಭಾರತ ಜಮೈಕಾಗೆ 50 ಸಾವಿರ ಡೋಸ್ ಕೊರೊನಾ ಲಸಿಕೆಯನ್ನು ರವಾನಿಸಿತ್ತು.