ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವವು ಏ.10ರಂದು ಆರಂಭಗೊಳ್ಳುವುದರಿಂದ ಪುತ್ತೂರು ಪೇಟೆಯಲ್ಲಿ ಶ್ರೀ ದೇವರ ಪೇಟೆ ಸವಾರಿಯಂದು ಸ್ವಚ್ಛತೆ, ದಾರಿ ದೀಪ ನಿರ್ವಹಣೆ ಮತ್ತು ಕುಡಿಯುವ ನೀರಿಗೆ ತೊಂದರೆ ಆಗದಂತೆ ಕಾರ್ಯನಿರ್ವಹಿಸಲು ನಗರಸಭೆ ಇಂಜಿನಿಯರ್, ಆರೋಗ್ಯ ಮತ್ತು ನೀರಿನ ವಿಭಾಗದ ಪ್ರಮುಖರ ಸಭೆ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಮಾ.22ರಂದು ನಡೆಯಿತು.
ಶ್ರೀ ದೇವರ ಪೇಟೆ ಸವಾರಿ ಸಂದರ್ಭ ದಾರಿಯ ಸುಚಿತ್ವ, ದಾರಿ ದೀಪ ನಿರ್ವಹಣೆ ಮಾಡಬೇಕು. ಪುತ್ತೂರು ಜಾತ್ರೋತ್ಸವಕ್ಕೆ ದೂರದ ಊರಿನಿಂದ ಪುತ್ತೂರು ಸಂಬಂಧಿಕರ ಮನೆಗೆ ಬರುವವರು ಅನೇಕರಿದ್ದಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ವಹಿಸುವಂತೆ ತಿಳಿಸಿದರು.
ಮುಂದಿನ ದಿನಗಳಲ್ಲಿ ಪವರ್ ಕಟ್ ಸಮಸ್ಯೆಯಿಂದ ಕುಡಿಯುವ ನೀರಿಗೆ ತೊಂದರೆ ಆಗದಂತೆ ಶಾಸಕ ಸಂಜೀವ ಮಠಂದೂರು ಅವರ ಜೊತೆಯಲ್ಲಿ ಮೆಸ್ಕಾಂ ಸಭೆ ಮಾಡುವಂತೆ ಚಿಂತಿಸಲಾಗಿದೆ ಎಂದರು. ವೇದಿಕೆಯಲ್ಲಿ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಪೌರಾಯುಕ್ತೆ ರೂಪಾ ಶೆಟ್ಟಿ, ಸಹಾಯಕ ಕಾರ್ಯಪಾಲ ಇಂಜಿನಿಯರ್ ಅರುಣ್ ಸೇರಿದಂತೆ ಅಭಿಯಂತರರು, ಆರೋಗ್ಯ ನಿರೀಕ್ಷಕರು, ನೀರಿನ ವಿಭಾಗದ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.