ಫಾಗ್ರಾಡಾಲ್ಸ್: ಜ್ವಾಲಾಮುಖಿ ಸ್ಫೋಟದ ವಿಡಿಯೋದಲ್ಲಿ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭೂಗರ್ಭದಿಂದ ಹೊರ ಬಂದ ಲಾವಾರಸ ಹೊಳೆಯಂತೆ ಹರಿದಿರೋ ಭಯಾನಕ ದೃಶ್ಯ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆಂಥೋನಿ ಕ್ವಿಂಟನೋ ಫೋಟೋಗ್ರಾಫಿ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು, 30 ಸಾವಿರಕ್ಕೂ ಅಧಿಕ ಬಾರಿ ರೀಟ್ವಿಟ್ ಆಗಿದೆ. ಈ ಜ್ವಾಲಾಮುಖಿ ನೋಡಲು ಸ್ಥಳೀಯರು ಸೇರಿದಂತೆ ದೂರದೂರಿಂದ ಬಂದಂತಹ ಛಾಯಾಗ್ರಾಹಕರ ಸ್ಫೋಟದ ಸಮೀಪ ತೆರಳಿ, ಅದರ ರೌದ್ರತೆಯನ್ನ ಕಂಡು ಹಿಂದಿರುಗಿದ್ದಾರೆ. ಡ್ರೋನ್ ನಿಂದ ಈ ಎಲ್ಲ ಲಾವಾರಸ ಹರಿಯೋದನ್ನ ಸೆರೆ ಹಿಡಿಯಲಾಗಿದೆ.
ಫಾಗ್ರಾಡಾಲ್ಸ್ ಫಾಲ್ ಐಲ್ಯಾಂಡ್ ಪರ್ವತದ ಮೇಲಿರುವ ಈ ಜ್ವಾಲಾಮುಖಿ ಸುಮಾರು ಆರು ಸಾವಿರ ವರ್ಷಗಳಿಂದ ಶಾಂತವಾಗಿತ್ತು. ಸ್ಫೋಟಕ್ಕೂ ಮುನ್ನ ಜ್ವಾಲಾಮುಖಿಯ ಪ್ರಖರತೆ ಮಿಂಚು ರೇಕ್ ಜಾವಿಕ್ ನಿಂದ ಗೋಚರಿಸುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಜ್ವಾಲಾಮುಖಿ ಸ್ಫೋಟವಾದ ಸ್ಥಳದಿಂದ ಸುಮಾರು 30 ರಿಂದ 32 ಕಿಲೋ ಮೀಟರ್ ವರೆಗೆ ಇದರ ಶಾಖವಿತ್ತು ಎಂದು ವರದಿಯಾಗಿದೆ.
WOW! FPV drone footage at the volcanic eruption in Fagradalsfjall Iceland. Definitely watch to the end. pic.twitter.com/wUxBb4ofLe
— Anthony Quintano Photography (@AnthonyQuintano) March 22, 2021