ಬೆಂಗಳೂರು: ಮಳಲಿ ವಿವಾದಿತ ಮಸೀದಿ ವಿಚಾರದಲ್ಲಿ ನಡೆಯುತ್ತಿರುವ ತಾಂಬೂಲ ಪ್ರಶ್ನೆ ವಿಚಾರವಾಗಿ ಎಸ್‌ಪಿ, ಡಿಸಿ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಅವರವರಿಗೆ ಏನೇನು ನಂಬಿಕೆಯಿದೆ ಅವರು ಏನು ಬೇಕಾದ್ರೂ ಮಾಡಲಿ. ಅದಕ್ಕೆ ನಮ್ಮ ತಕರಾರು ಇಲ್ಲ. ಅವ್ರ ಸ್ವಂತಕ್ಕೆ, ಮನೆಗೆ ಏನು ಬೇಕಾದ್ರೂ ಮಾಡ್ಲಿ. ಅವರು ಈ ರಾಜ್ಯವನ್ನು ಸಾಯಿಸುತ್ತಿದ್ದಾರೆ. ಖಾಸಗಿಯವರು ಇಂತಹ ವಿಚಾರದಲ್ಲಿ ತಲೆತೂರಿಸಿ ಗೊಂದಲ ಸೃಷ್ಟಿಸಬಾರದು.
ಇಂತವರ ಮೇಲೆ ಕೂಡಲೇ ಕೇಸು ಹಾಕಬೇಕು. ಇದನ್ನು ಖಂಡಿಸುತ್ತಿದ್ದೇನೆ. ಎಸ್‌ಪಿ, ಡಿಸಿ ಕೂಡಲೇ ಮಧ್ಯಪ್ರವೇಶಿಸಬೇಕು. ಇಂತಹ ವಿಷ್ಯದಲ್ಲಿ ಭವಿಷ್ಯ ಹೇಳುವವರನ್ನ,ಕೇಳುವವರನ್ನ ಬಂಧಿಸಬೇಕು ಎಂದು ಒತ್ತಾಯಿಸಿದರು.