ಕೊಪ್ಪಳ: ಮಸೀದಿಗಳಲ್ಲಿ ದೇವಸ್ಥಾನ ಪತ್ತೆಯಾಗಿರುವುದು ಹೊಸತೇನೂ ಅಲ್ಲ ಎಂದು ಹಿಂದೂ ಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹೇಳಿದ್ದಾರೆ.
ಮೊಘಲರ ಆಡಳಿತದ ಅವಧಿಯಲ್ಲಿ ದೇವಸ್ಥಾನ ಕೆಡವಿ ಮಸೀದಿ ಕಟ್ಟಿರುವ ಬಗ್ಗೆ ನಾವು ಇತಿಹಾಸದಲ್ಲಿ ಓದಿದ್ದೇವೆ, ಇದು ಯಾವುದೂ ಕಟ್ಟು ಕಥೆ ಅಲ್ಲ ಸತ್ಯವಾದ ಘಟನೆಗಳು ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಚೈತ್ರಾ ಕುಂದಾಪುರ ಹೇಳಿದ್ದಾರೆ.
ಮಳಲಿ ಭಾಗದಲ್ಲಿ ಮಾತ್ರ ಅಲ್ಲ, ದೇಶದ ಯಾವುದೇ ಮಸೀದಿ ತೆರವು ಮಾಡಿದರೂ ದೇವಸ್ಥಾನ ಸಿಗುತ್ತದೆ ಎಂದು ಹೇಳಿದರು.