ಪುತ್ತೂರು: ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಮತ್ತು ಮೆರವಣಿಗೆಗೆ ಧ್ವನಿವರ್ಧಕ ಬಳಸುವ ವಿಚಾರವಾಗಿ ಹಾಗೂ ಧ್ವನಿವರ್ಧಕ ಶಬ್ಧ ಮಿತಿ ಪಾಲನೆಯ ಕುರಿತು ಮೇ.25 ರಂದು ಧಾರ್ಮಿಕ ಮುಖಂಡರ ಸಭೆ ನಡೆಯಿತು.

ಪುತ್ತೂರು ಠಾಣಾ ವ್ಯಾಪ್ತಿಯ ದೇವಸ್ಥಾನ, ಭಜನಾಮಂದಿರ, ಮಸೀದಿಗಳ ಸಹಿತ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಧಾರ್ಮಿಕ ಪ್ರಮುಖರ ಸಭೆ ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆಯಿತು.

ಇನ್ ಸ್ಪೆಕ್ಟರ್ ಸುನಿಲ್ ಕುಮಾರ್ ರವರು ಮಾತನಾಡಿ, ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ನಿತ್ಯ ಧ್ವನಿ ವರ್ಧಕ ಬಳಸುವ ಹಾಗೂ ಮೆರವಣಿಗೆಗಳಿಗೆ ಧ್ವನಿವರ್ಧಕ ಬಳಸುವಲ್ಲಿ ಶಬ್ದದ ಮಿತಿ ಪಾಲನೆ ಮಾಡಬೇಕು. ಈ ಕುರಿತು ಸುತ್ತೋಲೆಯಂತೆ ಎಲ್ಲಾ ಧಾರ್ಮಿಕ ಮಂದಿರ, ಕ್ಷೇತ್ರ, ಸಂಸ್ಥೆಗಳು ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಬೆಳಿಗ್ಗೆ ಗಂಟೆ 6 ರಿಂದ ರಾತ್ರಿ 10ರ ತನಕ ಮಾತ್ರ ಧ್ವನಿವರ್ಧಕ ಬಳಸಲು ಅವಕಾಶವಿದೆ. ಸಂಬಂಧಪಟ್ಟ ಧಾರ್ಮಿಕ ಕೇಂದ್ರಗಳ ಸಂಘಟಕರು 15 ದಿವಸದೊಳಗೆ ಧ್ವನಿವರ್ಧಕ ಬಳಕೆಗಾಗಿ ನಿಗದಿತ ಅರ್ಜಿ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಧಾರ್ಮಿಕ ಮಂದಿರ ಮಸೀದಿಗೆ ಸಂಬಂಧಿಸಿ ಬಂದ ಮುಖಂಡರು ಮಾಹಿತಿ ಪಡೆದರು. ಠಾಣಾ ಎಸ್ ಐ ರಾಜೇಶ್ ಕೆ.ವಿ, ಎಸ್.ಐ ನಸ್ರಿನಾ ತಾಜ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.