ಕಡಬ: ಇತ್ತೀಚೆಗೆ ನಡೆದ ಅಖಿಲ ಭಾರತ ಕಾಂಗ್ರೆಸ್ ನ ನಿರ್ದೇಶನದಂತೆ ಡಿಜಿಟಲ್ ಮೂಲಕ ಯಾರೂ ಸದಸ್ಯರಾಗಿದ್ದಾರ ಅವರಿಗೆ ಮಾತ್ರ ಸಾಂಸ್ತಿಕ ಚುನಾವಣೆಯಲ್ಲಿ ಪಕ್ಷದ ವಿವಿಧ ಹುದ್ದೆಗಳಿಗೆ ಸ್ಪರ್ದಿಸಲು ಹಾಗೂ ಮತಚಲಾಯಿಸಲು ಸಾಧ್ಯ ಎಂದು ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ, ಕಡಬ ಬ್ಲಾಕ್ ಗೆ ಚುನಾವಣಾ ಉಸ್ತುವಾರಿಯಾಗಿರುವ ಎಚ್ ಮಹಮ್ಮದ್ ಅಲಿ ಹೇಳಿದರು.
ಅವರು ಕಡಬ ಬ್ಲಾಕ್ ನ ಪದಾಧಿಕಾರಿಗಳ ಹಾಗೂ ಪಕ್ಷದ ಮುಖಂಡರುಗಳ ಸಭೆಯನ್ನು ಉದ್ದೇಸಿ ಮಾತನಾಡಿ, ಪಕ್ಷದ ಸಿದ್ಧಾಂತ ಹಾಗೂ ಕಾಂಗ್ರೆಸ್ ನ ಜನಪರ ಕಾರ್ಯಕ್ರಮಗಳನ್ನು ಜನತೆಗೆ ತಿಳಿಸಿ ಪಕ್ಷಕ್ಕೆ ಸದಸ್ಯರನ್ನಾಗಿ ಸೇರಿಸುವ ಸದುದ್ದೇಶದಿಂದ ಹೊಸ ತಂತ್ರಜ್ಞಾನದ ಮೂಲಕ ಡಿಜಿಟಲ್ ಸದಸ್ಯತ್ವ ನೋಂದಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಇದರಂತೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೋಟ್ಯಾಂತರ ಜನರು ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನು ಪಡಕೊಂಡಿದ್ದಾರೆ ಎಂದು ಹೇಳಿದರು.

ಬೂತ್ ಅಧ್ಯಕ್ಷ, ಸಮಿತಿ ಪದಾಧಿಕಾರಿಗಳು ಹಾಗೂ ಬ್ಲಾಕ್ ಗೆ ಓರ್ವ ಪ್ರತಿನಿಧಿಯನ್ನು ಮೇ 25 ರ ಒಳಗೆ ಆಯ್ಕೆ ಮಾಡಬೇಕಾಗಿರುತ್ತದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಬೇಕಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ ಬ್ಲಾಕ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಮಾತನಾಡಿ, ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ಸಹಕಾರದಿಂದ ಆಯ್ಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯುವಂತೆ ವ್ಯವಸ್ಥೆಗೊಳಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿ.ಪ. ಮಾಜಿ ಸದಸ್ಯರಾದ ಪಿಪಿ ವರ್ಗಿಸ್, ಸರ್ವೋತ್ತಮಗೌಡ, ಪಕ್ಷದ ಹಿರಿಯ ನಾಯಕ ಕೆ ಪಿ ತೋಮಸ್, ಮಾಜಿ ಬ್ಲಾಕ್ ಅಧ್ಯಕ್ಷರಾದ ವಿಜಯಕುಮಾರ್ ರೈ, ಬಾಲಕೃಷ್ಣ ಬಲ್ಲೇರಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಚ್ ಕೆ ಇಲ್ಯಾಸ್ ಹೊಸಮಠ, ಮಾಜಿ ತಾಲೂಕ್ ಪಂಚಾಯತ್ ಸದಸ್ಯ ಫಝಲ್ ಕಡಬ, ಕಡಬ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹನೀಫ್, ಕಡಬ ಬ್ಲಾಕ್ ಕೆಪಿಸಿಸಿ ಸಂಯೋಜಕರಾದ ನಂದಕುಮಾರ್, ಸುಳ್ಯ ಬ್ಲಾಕ್ ಕೆಪಿಸಿಸಿ ಸಂಯೋಜಕರಾದ ಜಿ ಕೃಷ್ಣಪ್ಪ, ನ್ಯಾಯವಾದಿ ಮಾಜಿ ಬ್ಲಾಕ್ ಅಧ್ಯಕ್ಷ ಶೀನಪ್ಪ ಗೌಡ ಬೈತಡ್ಕ, ಕಾರ್ಮಿಕ ಘಟಕದ ಅಧ್ಯಕ್ಷ ಟಿ ಎಂ ಮ್ಯಾತ್ಯು, ಪಂಚಾಯತ್ ಸದಸ್ಯ ಯತೀಶ್ ಬಾನಡ್ಕ, ಕಡಬ ಪಟ್ಟಣ ಕಾಂಗ್ರೆಸ್ ಅಧ್ಯಕ್ಷ ಜನಾರ್ಧನ ಪನೆಮಜಲು, ಎಪಿಎಂಸಿ ಮಾಜಿ ಸದಸ್ಯ ರೊಯ್ ಅಬ್ರಹಾಂ, ಯುವ ಕಾಂಗ್ರೆಸ್ ನ ಅವಿನಾಶ್ ಬೈತಡ್ಕ, ಕಾಂಗ್ರೆಸ್ ಮುಖಂಡರುಗಳಾದ ರವೀಂದ್ರ ರುದ್ರಪಾದ ಸುಬ್ರಮಣ್ಯ, ಶಿವರಾಮ ಶೆಟ್ಟಿ ಸುಬ್ರಮಣ್ಯ, ಸತೀಶ್ ಶೆಟ್ಟಿ ಬಲ್ಯ, ಫಾರುಖ್ ಅಮೈ, ಝೆವಿಯರ್ ಬೇಬಿ ಮೊದಲಾದವರು ಉಪಸ್ಥಿತರಿದ್ದರು.