ಮಂಗಳೂರು: ದಕ್ಷಿಣ ವಲಯ-1 ರ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಗಾಂಜಾ ವ್ಯಸನ ಮಾಡುತ್ತಿದ್ದ ಏಳು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಅನೀಶ್, ಅಭಿರಾಮ್ , ಮಹಮ್ಮದ್ ಮಾರ್ವನ್, ರಿಲ್ಲಾಶ್, ಹರ್ಷ, ಮಹಮ್ಮದ್ ಸನನ್ ಮತ್ತು ರಯ್ಯಾನ್ ಬಂಧಿತ ಆರೋಪಿಗಳು.
ಬಂಧಿಸಲ್ಪಟ್ಟ ಎಲ್ಲಾ ಆರೋಪಿಗಳು ಕಾಲೇಜಿನ ವಿದ್ಯಾರ್ಥಿಗಳಾಗಿದ್ದು ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕರಾದ ಸೀಮಾ ಸುವಾರೀಸ್ , ಅಬಕಾರಿ ಉಪ ನಿರೀಕ್ಷಕರಾದ ಶಂಕರ್ ಕೆ . ಮತ್ತು ಸಿಬ್ಬಂದಿಗಳಾದ ಸಂತೋಷ್ ಕುಮಾರ್ , ಸುನಿಲ್ ಶೇಟ್ ಬೈಂದೂರ್ , ಕುಮಾರ್ ಆರ್.ನೀಲನಾಯ್ಕ ಮತ್ತು ಸಂದೀಪ್ ಕುಮಾರ್ ಭಾಗಿಯಾಗಿದ್ದರು.



























