ಬೆಳ್ತಂಗಡಿ: ಕೆಂಪು ಮಳೆ ಸುರಿದ ಅಚ್ಚರಿಯ ಘಟನೆಯೊಂದು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಡಿಗಲ್ ಎಂಬಲ್ಲಿ ನಡೆದಿದೆ.

ಕಲ್ಮಂಜ ವ್ಯಾಪ್ತಿಯ ಗಡಿಕಲ್ಲು ಶಾನುಭೋಗ್ ನಿವಾಸಿ ದಿವಾಕರ ಗೌಡ ಎಂಬವರ ಮನೆಯ ಪರಿಸರದಲ್ಲಿ ಕೆಂಪು ಮಳೆ ಸುರಿದಿದೆ. ಹೀಗಾಗಿ ನಿಡುಗಲ್ಲು ಪ್ರದೇಶದ ಜನರು ಕೆಂಪು ಮಳೆಯನ್ನು ವೀಕ್ಷಿಸಿ ಆಶ್ಚರ್ಯಚಕಿತರಾಗಿದ್ದಾರೆ.
ಹವಾಮಾನ ಇಲಾಖೆಯ ತಜ್ಞರ ಅಧ್ಯಯನದ ಬಳಿಕವಷ್ಟೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ. ಕೇವಲ ಇಲ್ಲಿ ಮಾತ್ರವಲ್ಲದೆ ಬೆಳ್ತಂಗಡಿಯ ಶಿರ್ಲಾಲು ಎಂಬ ಪ್ರದೇಶದಲ್ಲಿ ಕೂಡಾ ಕೆಂಪು ಮಳೆ ಸುರಿದಿದೆ.

























