ಬೆಳ್ತಂಗಡಿ, ಜು. 23: ಮನೆಯ ಮೇಲೆ ಕಲ್ಲು ತೂರಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದಲ್ಲದೆ ಮನೆಯ ಹೊರಾಂಡದಲ್ಲಿದ್ದ ನಗದು ಹಣವನ್ನು ಕಳವು ಮಾಡಿರುವ ಆರೋಪದಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಬಾಜೆ ನಿವಾಸಿ ಎಲಿಯಮ್ಮ ತೋಮಸ್ (60) ಅವರು ನೀಡಿದ ದೂರಿನ ಪ್ರಕಾರ, ಜುಲೈ 10ರಂದು ರಾತ್ರಿ ಅವರು ಮನೆಯಲ್ಲಿದ್ದ ವೇಳೆ ಆರೋಪಿಗಳಾದ ಮನೋಜ್ ಎನ್.ಕೆ. ಹಾಗೂ ರಾಜು ಮನೆ ಸಮೀಪಕ್ಕೆ ಬಂದು ಮನೆಯ ಹಂಚಿಗೆ ಕಲ್ಲು ಎಸೆದು, ಅವಾಚ್ಯವಾಗಿ ನಿಂದಿಸಿ, ಅವರ ಮಗನಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ಆರೋಪಿತ ಮನೋಜ್ ಎನ್.ಕೆ. ಮನೆಯ ಹೊರಾಂಡದಲ್ಲಿದ್ದ ರೂ.2,900 ನಗದು ಹಣವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 50/2026ರಡಿ ಬಿಎನ್‌ಎಸ್-2023ರ ಕಲಂ 329(3) ಹಾಗೂ 3(5)ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



























