ವಿಟ್ಲ, ಜು. 23: ವಿಟ್ಠಲ ಎಜುಕೇಶನ್ ಸೊಸೈಟಿ ಹಿರಿಯ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷರಾಗಿ ರವಿಪ್ರಕಾಶ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಸುದರ್ಶನ್ ಪಡಿಯಾರ್, ಮಾಲತಿ ಕಾನತ್ತಡ್ಕ ಹಾಗೂ ಭಾಸ್ಕರ್ ರೈ, ಕಾರ್ಯದರ್ಶಿಯಾಗಿ ಮೋಹನ್ ಬಿ, ಜತೆ ಕಾರ್ಯದರ್ಶಿಯಾಗಿ ದಿನಕರ ಆಳ್ವ, ಕೋಶಾಧಿಕಾರಿಯಾಗಿ ಮೋನಪ್ಪ ಗೌಡ, ಜತೆ ಕೋಶಾಧಿಕಾರಿಯಾಗಿ ರಾಜಶೇಖರ ಎಂ ಅವರನ್ನು ಆಯ್ಕೆ ಮಾಡಲಾಯಿತು.
ಕ್ರೀಡಾ ಕಾರ್ಯದರ್ಶಿಗಳಾಗಿ ಶ್ರೀನಿವಾಸ್ ಗೌಡ ಮತ್ತು ದಿನೇಶ್ ಕುಮಾರ್, ಜತೆ ಕ್ರೀಡಾ ಕಾರ್ಯದರ್ಶಿಯಾಗಿ ಸಮದ್ ವಿಟ್ಲ ಆಯ್ಕೆಯಾದರು. ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಅಶೋಕ ವಿಟ್ಲ ಹಾಗೂ ರವಿವರ್ಮ ವಿಟ್ಲ ಅರಮನೆ ನೇಮಕಗೊಂಡರು.
ಸಭೆಯಲ್ಲಿ ಖಾಯಂ ಆಹ್ವಾನಿತರಾಗಿ ಎ.ಎಸ್. ಆದರ್ಶ ಚೊಕ್ಕಾಡಿ, ಕಿರಣ್ ಕುಮಾರ್, ಶಂಕರನಾರಾಯಣ ಪ್ರಸಾದ್, ನಿತ್ಯಾನಂದ ನಾಯಕ್ ಹಾಗೂ ರಾಧಾಕೃಷ್ಣ ನಾಯಕ್ ಅವರನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳಿಗೆ ಸಂಘದ ಸದಸ್ಯರು ಅಭಿನಂದನೆ ಸಲ್ಲಿಸಿ, ಸಂಘದ ಅಭಿವೃದ್ಧಿ ಮತ್ತು ಹಿರಿಯ ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ಶುಭ ಹಾರೈಸಿದರು.


























