ದ್ವಾರಕಾ ರಿಫ್ರೆಶ್ ಮೆಂಟ್ಸ್ ಮತ್ತು ಸಂತೃಪ್ತಿ ವೆಜ್, ಪುತ್ತೂರು ಇವರ ಸಹಯೋಗದಲ್ಲಿ ಜುಲೈ 24, 25 ಮತ್ತು 26ರಂದು ಕೆಮ್ಮಾರದ ಉಜ್ಜೀವನ ಹಿರಿಯ ನಾಗರಿಕರ ಬಡಾವಣೆಯ ದ್ವಾರಕಾ ರಿಫ್ರೆಶ್ ಮೆಂಟ್ಸ್ ನಲ್ಲಿ ‘ದೋಸೆ ಮೇಳ’ ಯಶಸ್ವಿಯಾಗಿ ಸಂಪನ್ನಗೊಂಡಿತು.
ಮೊದಲ ದಿನ ದೋಸೆ ಮೇಳವನ್ನು ಬಳ್ಳಿ ಆಯುರ್ ಗ್ರಾಮದ ಡಾ. ಸುಪ್ರೀತ್ ಲೋಬೋ ಉದ್ಘಾಟಿಸಿದರು. ಮುಖ್ಯ ಅಭ್ಯಾಗತರಾಗಿ ಪಾಕಪ್ರವೀಣರಾದ ಶ್ರೀ ರವಿ ಕುಂಟಿನಿ, ಡಾ. ಮೇಧಾ ಪಟೇಲ್, ಸಾವಯವ ಉದ್ಯಮಿಗಳಾದ ಶ್ರೀ ಸುಹಾಸ್ ಮರಿಕೆ ಭಾಗಿಯಾಗಿದ್ದರು. ಸಭೆಯ ಅಧ್ಯಕ್ಷತೆಯನ್ನು ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ ವಹಿಸಿದ್ದರು. ದ್ವಾರಕಾ ಸಮೂಹ ಸಂಸ್ಥೆಗಳ ಸಹಾಯಕ ನಿರ್ದೇಶಕಿ ಶ್ರೀಮತಿ ಅಶ್ವಿನಿ ಎನ್., ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಅಮೃತಕೃಷ್ಣ ಎನ್. ಉಪಸ್ಥಿತರಿದ್ದರು.
ಬಳಿಕ ಶ್ರೀ ವಿದ್ವಾನ್ ವೆಂಕಟಕೃಷ್ಣ ಭಟ್ಟ ಗುಂಡ್ಯಡ್ಕ ಮತ್ತು ಮತ್ತು ಬಳಗದವರಿಂದ ‘ಭಕ್ತಿ ಗಾನ ಲಹರಿ’ ಕಾರ್ಯಕ್ರಮ ಸಂಪನ್ನಗೊಂಡಿತು.
ಎರಡನೇ ದಿನ ಶ್ರೀ ಯಜ್ಞೇಶ ಆಚಾರ್ ಮತ್ತು ಬಳಗದವರಿಂದ ‘ಭಕ್ತಿ ಗಾನ ಲಹರಿ’ ಕಾರ್ಯಕ್ರಮ, ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ವಿದುರಾತಿಥ್ಯ’ ಯಕ್ಷಗಾನ-ತಾಳಮದ್ದಳೆ ಜರುಗಿತು.
ಮೂರನೇ ದಿನ ಸಮಾರೋಪ ಕಾರ್ಯಕ್ರಮ ನಡೆಯಿತು. ಈ ಸಭೆಯ ಅಧ್ಯಕ್ಷತೆಯನ್ನು ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ ವಹಿಸಿದ್ದರು. ವಿವೇಕಾನಂದ ಮಹಾವಿದ್ಯಾಲಯದ ಅಧ್ಯಕ್ಷರಾಗಿರುವ ಡಾ. ಶ್ರೀಪತಿ ಕಲ್ಲೂರಾಯರು ಸಮಾರೋಪ ಭಾಷಣವನ್ನು ಮಾಡಿದರು. ಪ್ರಮುಖ ಅಭ್ಯಾಗತರಾಗಿ ಗೋಲೆಕ್ಸ್ ನ ಶ್ರೀ ಕೃಷ್ಣ ಮೋಹನ ಇವರು ಭಾಗಿಯಾದರು. ದ್ವಾರಕಾ ಪ್ರತಿಷ್ಠಾನದ ನಿರ್ದೇಶಕಿ ಶ್ರೀಮತಿ ಅಮೃತಾ ಶಾನುಭಾಗ್ ಉಪಸ್ಥಿತರಿದ್ದರು.
ಸಮಾರೋಪ ಕಾರ್ಯಕ್ರಮದ ಬಳಿಕ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ, ಪುತ್ತೂರು ಇವರಿಂದ ಭರತನಾಟ್ಯ ಕಾರ್ಯಕ್ರಮ ಸಂಪನ್ನಗೊಂಡಿತು.
ದೋಸೆ ಮೇಳದಲ್ಲಿ ಐವತ್ತಕ್ಕೂ ಮಿಕ್ಕಿ ದೋಸೆಗಳು ಸೇರಿದಂತೆ ಚಾಟ್ಸ್, ಜ್ಯೂಸ್ ಗಳು ಲಭ್ಯವಿದ್ದವು. ಗ್ರಾಹಕರು ಬೃಹತ್ ಸಂಖ್ಯೆಯಲ್ಲಿ ದೋಸೆ ಮೇಳದಲ್ಲಿ ಭಾಗವಹಿಸಿದರು.


























