ಪುತ್ತೂರು : ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಪದ್ಮಶ್ರೀ ಸೋಲಾರ್ ಸಂಸ್ಥೆಯ ವತಿಯಿಂದ ಸೋಲಾರ್ ನಿಂದ ಕಾರ್ಯಚರಿಸುವ ಬಿಸಿ ನೀರಿನ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಲಾಗಿದೆ.
ಪುತ್ತೂರಿನ ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಅವರ ಮಾಲಕತ್ವದ ಪದ್ಮಶ್ರೀ ಗ್ರೂಪ್ಸ್ ವತಿಯಿಂದ ಮಠಂತಬೆಟ್ಟು ಕ್ಷೇತ್ರದ ದೈನಂದಿನ ಉಪಯೋಗಕ್ಕಾಗಿ ಈ ಕೊಡುಗೆ ನೀಡಲಾಗಿದೆ. ಪರ್ಯಾಯ ಇಂಧನ ಮೂಲವಾಗಿ ಜನಪ್ರಿಯವಾಗುತ್ತಿರುವ ಸೌರಶಕ್ತಿಯಿಂದ ಕಾರ್ಯಚರಿಸುವ ವಿವಿಧ ಉಪಕರಣಗಳನ್ನು ಜನಪ್ರಿಯಗೊಳಿಸುವಲ್ಲಿ ಪದ್ಮಶ್ರೀ ಸೋಲಾರ್ ಸಂಸ್ಥೆ ಮಹತ್ವದ ಪಾತ್ರ ನಿರ್ವಹಿಸುತ್ತಿದೆ.