ಪುತ್ತೂರು : ಪುತ್ತೂರು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಸಾಲ್ಮರ ಮತ್ತು ಕೋಡಿಂಬಾಡಿಯಲ್ಲಿ ಅಕ್ರಮ ಮರದ ದಿಮ್ಮಿಗಳ ಸಾಗಾಟ ಪ್ರಕರಣವನ್ನು ಭೇದಿಸಿದ್ದಾರೆ. ಸಾಲ್ಮರ ಮತ್ತು ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಎಂಬಲ್ಲಿ ಪಿಕಪ್ ಜೀಪಿನಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವುದನ್ನು ಗಸ್ತು ನಿರತ ಅರಣ್ಯ ರಕ್ಷಕ ರಾಜುಚಂದ್ರ ಎ. ಪಿ. ಅರಣ್ಯ ರಕ್ಷಕ ಸತ್ಯನ್ ಡಿ. ಜಿ. ಪಿ. ಸಿ ಭಾಗ್ಯ ಮತ್ತು ಯಮುನ ಹಾಗೂ ಜೀಪು ಚಾಲಕ ಜಗದೀಶ್ ಅವರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ.
ಒಟ್ಟು 29 ದಿಮ್ಮಿಗಳು ಮತ್ತು ಎರಡು ಪಿಕಪ್ ಜೀಪುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾರ್ಯಾಚರಣೆ ಸಂದರ್ಭ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕರಿಕಾಲನ್ ವಿ ರವರ ಮಾರ್ಗದರ್ಶನದಲ್ಲಿ ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ. ಪಿ ಕಾರ್ಯಪ್ಪ ಅವರ ನಿರ್ದೇಶನದಂತೆ ಪುತ್ತೂರು ವಲಯ ಅರಣ್ಯಾಧಿಕಾರಿ ಸುಬ್ಬಯ್ಯ ಅವರು ತನಿಖೆ ಮುಂದುವರಿಸುತ್ತಿದ್ದಾರೆ.