ಪುತ್ತೂರು : ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಹಿಮೆಯನ್ನು ಹಿರಿಮೆಯನ್ನು ಸಾರುವ ಹಾಡೊಂದನ್ನು ಸುರತ್ಕಲ್ ಶ್ರೀನಿವಾಸ ನಗರದ ಮಹಾನಗರ ಬಸ್ ನಿಲ್ದಾಣದ ಬಳಿಯ ಪೊನ್ನಗಿರಿ ಕಂಪೌಂಡ್ ನ ಶ್ರೀಕಾಂತ್ ಭಟ್ ಎಂಬವರ ಪುತ್ರ ಶಿವಮಣ್ಯು ಹಾಡಿ ಗಮನ ಸೆಳೆದಿದ್ದಾರೆ. ಈ ಧ್ವನಿ ಸುರುಳಿಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಬಿಡುಗಡೆಗೊಳಿಸಿದರು.