ಪುತ್ತೂರು: ಒಡಿಯೂರು ಷಷ್ಟ್ಯಬ್ಧ ಸಂಭ್ರಮ ತಾಲೂಕು ಸಮಿತಿ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ವತಿಯಿಂದ ಮೇ.೨ರಂದು ಪುತ್ತೂರು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿರುವ “ತುಳುನಾಡ ಐಸಿರ-೨೦೨೧” ತುಳು ಸಾಹಿತ್ಯ ಸಮ್ಮೇಳನದ ಯಶಸ್ಸಿಗಾಗಿ ಪೂರ್ವಭಾವಿ ಸಭೆ ಎ.೧೮ರಂದು ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಿತು.
ಒಡಿಯೂರು ಶ್ರೀ ಷಷ್ಟ್ಯಬ್ಧ ಸಂಭ್ರಮ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮ್ಮೇಳನದಲ್ಲಿ ನಡೆಸುವ ವಿವಿಧ ಆಯಾಮಗಳ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು. ಈಗಾಗಲೇ ಸಮ್ಮೇಳನದ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಸಮಿತಿ ಪದಾಧಿಕಾರಿಗಳಿಗೆ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ತಿಳಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ತುಳುಕೂಟ, ಯಕ್ಷಮದಿಪು, ತುಳು ತುಲಿಪು, ತುಳು ಪದರಂಗಿತ, ತುಳು ನಲಿಕೆ ಭಜನೆ, ಸಾಧಕೆರೆಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳ ಕುರಿತ ಆಮಂತ್ರಣ ಪತ್ರಿಕೆಯನ್ನು ಈಗಾಗಲೇ ಅತಿಥಿ ಗಣ್ಯರಿಗೆ ತಲುಪಿಸಲಾಗಿದೆ. ಅಲ್ಲದೆ ಕಾರ್ಯಕ್ರಮಗಳ ಪೂರ್ವಸಿದ್ಧತೆಗಳು ಭರದಿಂದ ಸಾಗುತ್ತಿದೆ. ಅಲ್ಲದೆ ಕಾರ್ಯಕ್ರಮದ ನೆನಪಿನ ಸಂಚಿಕೆ ಬಿಡುಗಡೆ ಮಾಡಲಾಗುವುದು. ಈ ಸಂಚಿಕೆಯಲ್ಲಿ ಈ ಹಿಂದೆ ನಡೆದ ಒಡಿಯೂರು ಶ್ರೀ ಷಷ್ಟ್ಯಬ್ಧ ಸಂಭ್ರಮದ ೬೦ ಕಾರ್ಯಕ್ರಮಗಳ ವಿವಿಧಗಳನ್ನು ಫೋಟೊ ಸಹಿತ ಪ್ರಕಟಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಕಾರ್ಯಕ್ರಮಕ್ಕೆ ಸ್ವಾಮೀಜಿಗಳು, ಸಚಿವರು, ಶಾಸಕರು, ಸ್ಥಳೀಯಾಡಳಿತ ಗಣ್ಯರುಗಳನ್ನು ಈಗಾಗಲೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಒಟ್ಟಾರೆಯಾಗಿ ಕಾರ್ಯಕ್ರಮಗಳನ್ನು ಕೋವಿಡ್ ನಿಯಮದಂತೆ ಪಾಲ್ಗೊಳ್ಳುವ ಎಲ್ಲರೂ ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸೀತಾರಾಮ ರೈ ಅವರು ವಿನಂತಿಸಿದರು. ವೇದಿಕೆಯಲ್ಲಿ ಒಡಿಯೂರು ಶ್ರೀ ಷಷ್ಟ್ಯಬ್ಧ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷ ಸಹಜ್ ರೈ ಬಳಜ್ಜ, ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ, ಸಮನ್ವಯ ಸಮಿತಿ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಆರ್ಥಿಕ ಸಮಿತಿ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಹಿರಿಯ ಸಾಹಿತಿ, ಪತ್ರಕರ್ತ ಪ್ರೊ.ವಿ.ಬಿ.ಅರ್ತಿಕಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರ್ಥಿಕ ಸಮಿತಿ ಬೂಡಿಯಾರ್ ರಾಧಾಕೃಷ್ಣ ರೈ, ಸ್ವಾಗತ ಸಮಿತಿಯ ಸಾಜ ರಾಧಾಕೃಷ್ಣ ಆಳ್ವ, ಮೆರವಣಿಗೆ ಸಮಿತಿ ಸಂಚಾಲಕ ಜಗದೀಶ ಶೆಟ್ಟಿ ನೆಲ್ಲಕಟ್ಟೆ, ಸಾಂಸ್ಕೃತಿ ಸಮಿತಿ ಸಂಚಾಲಕ ಭಾಸ್ಕರ ಬಾರ್ಯ, ಕಾರ್ಯಕ್ರಮ ಸಂಯೋಜನ ಸಮಿತಿ ಸಂಚಾಲಕ ಚಂದ್ರಹಾಸ ರೈ, ಸುಂದರ ರೈ ಮಂದಾರ, ಕೃಷ್ಣಪ್ರಸಾದ್ ಆಳ್ವ, ಅತಿಥಿ ಸತ್ಕಾರ ಸಮಿತಿ ಸಂಚಾಲಕ ಜಯಪ್ರಕಾಶ್ ರೈ ನೂಜಿಬೈಲು, ರಂಜಿನಿ ಶೆಟ್ಟಿ, ಬಿ ಸಚ್ಚಿದಾನಂದ ರೈ, ಉಮೇಶ್ ರೈ ನಡುಬೈಲು, ನಿತ್ಯಾನಂದ ಶೆಟ್ಟಿ, ಪುರಂದರ ರೈ ಕೆಯ್ಯೂರು, ಶಾಂತಾ ಕುಂಟಿನಿ, ಎ ಚಿಕ್ಕಪ್ಪ ನಾಕ್, ಲೋಕೇಶ್ ಹೆಗ್ಡೆ, ವಿಜಯ ಕುಮಾರ್ ಭಂಡಾರಿ ಹೆಬ್ಬಾರ ಬೈಲು, ಸಂಯೋಜಕಿಯರಾದ ಸವಿತಾ ರೈ, ಶಶಿ ಡಿ.ವೇದಾವತಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ತುಳು ಸಾಹಿತ್ಯ ಸಮ್ಮೇಳನದ ಪ್ರಧಾನ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ ಸ್ವಾಗತಿಸಿ, ವಂದಿಸಿದರು.