ಅಯೋಧ್ಯೆ: ಉತ್ತರಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಭಾರೀ ಪ್ರಮಾಣದಲ್ಲಿ ಏರಿಕೆ ಆಗ್ತಿದೆ. ಹೀಗಾಗಿ ಇದೇ ಏಪ್ರಿಲ್ 21ರಂದು ನಡೆಯಲಿರುವ ರಾಮನವಮಿ ಉತ್ಸವವನ್ನು ರದ್ದುಗೊಳಿಸಲು ಅಯೋಧ್ಯಾ ಜಿಲ್ಲಾಡಳಿತ ತೀರ್ಮಾನಿಸಿದೆ.
ಇದಕ್ಕೆ ಸಹಕರಿಸುವಂತೆ ಸಂತರನ್ನು ಜಿಲ್ಲಾಡಳಿತ ಕೇಳಿಕೊಂಡಿದೆ. ರಾಮನವಮಿಯಂದು ಅಯೋಧ್ಯೆಯ ರಾಮಜನ್ಮ ಭೂಮಿ ಹಾಗೂ ಸರಯೂ ನದಿಯ ದಂಡೆಯ ಮೇಲೆ ಲಕ್ಷಾಂತರ ಮಂದಿ ಸೇರುತ್ತಾರೆ. ಹೀಗಾಗಿ ರಾಮನವಮಿ ಉತ್ಸವವನ್ನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ ಅಂತ ಜಿಲ್ಲಾಡಳಿತ ತಿಳಿಸಿದೆ.