ವಿಟ್ಲ: ಮಹಾಶಕ್ತಿ ಕೇಂದ್ರ ಅಧ್ಯಕ್ಷರ ಬೂತ್ ನ ಬೂತ್ ಅಧ್ಯಕ್ಷ, ಆರ್.ಎಸ್. ಎಸ್ ತಾಲೂಕು ಮುಖಂಡರ ಹತ್ತಿರದ ಸಂಬಂಧಿ ಸೇರಿದಂತೆ ಹಲವಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎಂದು ವರದಿಯಾಗಿದೆ.
ವಿಟ್ಲ ಬಿಜೆಪಿಯ ಹಲವಾರು ಕಾರ್ಯಕರ್ತರು ಕಾಂಗ್ರೆಸ್ ಮುಖಂಡೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಉಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.
ವಿಟ್ಲ ಬಿಜೆಪಿ ಮಹಾಶಕ್ತಿ ಕೇಂದ್ರದ ಅರುಣ್ ವಿಟ್ಲ ರವರು ಪ್ರತಿನಿಧಿಸುವ 11ನೇ ವಾರ್ಡಿನ ಅಧ್ಯಕ್ಷ ಮೋಹನ್ ಕಟ್ಟೆ ಅವರು ಕಾಂಗ್ರೆಸ್ ಪಕ್ಷದ ಸೇರಿದ ಪ್ರಮುಖರು ಅಲ್ಲದೇ ವಿಟ್ಲ ತಾಲೂಕು ಆರ್.ಎಸ್. ಎಸ್ ಜವಾಬ್ದಾರಿ ಹೊಂದಿರುವ ಪ್ರಮುಖರ ತೀರಾ ಹತ್ತಿರದ ಸಂಬಂಧಿ ಯೋಗಿಶ್ ಗೌಡ ದೇವಸ್ಯ ಸೇರಿದಂತೆ ರಾಜೇಶ್, ಮಹಾಬಲ, ವರದರಾಜ್ ಕೊಟ್ಟಾರಿ ಸಹಿತ ಹಲವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ.
ಈಗಾಗಲೇ ಭಿನ್ನಮತದಿಂದ ತತ್ತರಿಸಿದೆ ಎನ್ನಲಾಗುತ್ತಿರುವ ವಿಟ್ಲ ಬಿಜೆಪಿಗೆ ಇದು ಆಘಾತವನ್ನು ನೀಡಿದೆ. ಇನ್ನೂ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ..