ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಬಾರಿಕೆ ನಿವಾಸಿ ಹರೀಶ್ ರವರು ಸಿಡಿಮದ್ದು ಸಿಡಿಸುವ ಸಂದರ್ಭದಲ್ಲಿ ಕೈಯಲ್ಲಿ ಸಿಡಿಮದ್ದು ಸಿಡಿದು ಕೈ ವಿಪರೀತವಾಗಿ ಗಾಯಗೊಂಡಿದ್ದು, ಇವರ ಮನೆಗೆ ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಭೇಟಿ ನೀಡಿದರು.
ಹರೀಶ್ ರವರ ಮನೆಗೆ ಖುದ್ದು ಭೇಟಿ ನೀಡಿದ ಅಶೋಕ್ ರೈ ರವರು ಆರೋಗ್ಯ ವಿಚಾರಿಸಿದರು. ಹಾಗೆಯೇ ಆರ್ಥಿಕ ಸಹಾಯವನ್ನು ನೀಡಿ ಬೇಗ ಗುಣಮುಖರಾಗುವಂತೆ ತಿಳಿಸಿದರು..