ಲಾಕ್ಡೌನ್ ಹೀಗೆ ಮುಂದುವರೆದರೆ ಜನರ ಜೀವನದ ಸ್ಥಿತಿ ಬಹಳ ಕಷ್ಟಕ್ಕೆ ಹೋಗುವ ಸಾಧ್ಯತೆ ಇದೆ, ದಿನ ದುಡಿದು ಕೆಲಸ ಮಾಡುವವರಿಗೆ ಹೊಟ್ಟೆಗಿಲ್ಲದ ಸ್ಥಿತಿಯಾಗಿದೆ, ಆದರೆ ಸರಕಾರದ ಬೇಜವಾಬ್ದಾರಿಯಿಂದ ಇವತ್ತು ಕೊರೊನಾ ಅನ್ನುವಾಗ ಎಲ್ಲರೂ ಭಯಪಡುವ ಸ್ಥಿತಿಯಾಗಿದೆ.
ವಿಚಿತ್ರ ಅನ್ನಿಸುತ್ತಿದೆ ದೇವಸ್ಥಾನವನ್ನು ಬಂದ್ ಮಾಡಲಾಗಿದೆ, ಅಲ್ಲಿ ಒಂದು ಚಮಚ ತೀರ್ಥ ಕೊಡುವುದು ಆ ತೀರ್ಥದಲ್ಲಿ ಕೊರೊನಾ ಬರುತ್ತದೆ, ಬಾರಿನ ತೀರ್ಥದಲ್ಲಿ ಕೊರೊನಾ ಬರುವುದಿಲ್ಲ ಅಂತಾ ಅದನ್ನು ಓಪನ್ ಇಟ್ಟಿದ್ದಾರೆ. ಜ್ಯೂಸ್ ಸೆಂಟರ್ ಬಂದ್ ಮಾಡಲಾಗಿದೆ, ವೈನ್ ಶಾಪ್ ಓಪನ್ ಇಡಲಾಗಿದೆ ಇದೊಂದು ಹಾಸ್ಯಾಸ್ಪದ ವಿಷಯವಾಗಿದೆ. ಕೊರೊನಾ ರೋಗಿಗೆ ಬೇಕಿರುವಂತಹ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ, ಆಕ್ಸಿಜನ್ ಇಲ್ಲ, ರೋಗಿಗಳು ಮಾರ್ಗದಲ್ಲಿ ಬಿದ್ದು ಸಾಯುತ್ತಾ ಇದ್ದಾರೆ. ಅದರಲ್ಲೂ ಮೈಸೂರಿನಲ್ಲಿ ಸಾಯುವ ಮೊದಲೇ ಚಟ್ಟವನ್ನು ರೆಡಿ ಮಾಡ್ತಾ ಇದ್ದಾರೆ ಇದನ್ನೆಲ್ಲಾ ನೋಡಿದಾಗ ಬಹುಷಃ ಇವರು ಅಧಿಕಾರಕ್ಕೆ ಬರುವವರೆಗೆ ಇವರೇ ದೊಡ್ಡವರು ಬಂದ ಮೇಲೆ ಜನಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ರಾಜಕೀಯವನ್ನು ಬಿಟ್ಟು ತೀವ್ರವಾದ ಈ ಕೋವಿಡ್ ಬಿಕ್ಕಟ್ಟಿನ ಕಾಲದಲ್ಲಿ ಅಗತ್ಯ ಇರುವವರಿಗೆ ಸಹಾಯವನ್ನು ನೀಡಿ ಮತ್ತು ನಮ್ಮ ಜನರ ನೋವನ್ನು ಕಡಿಮೆ ಮಾಡುವ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದು ಕಾರ್ಯಕರ್ತರಿಗೆ ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧೀಯವರು ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಹೇಳುವುದು ಯಾರಿಂದ ಯಾರಿಗೇ ಸಹಕಾರ ಬೇಕು ಅವರಿಗೇ ಜಾತಿ, ಧರ್ಮ, ಪಕ್ಷ ಯಾವುದನ್ನು ನೋಡದೆ ನಮ್ಮಿಂದ ಆಗುವಂತಾ ಸಹಕಾರ ನೀಡಿ.
ಸರಕಾರಕ್ಕೆ ಒತ್ತಾಯ ಮಾಡುವುದು ಇಷ್ಟೇ ನಿಮ್ಮ ಈ ಅವ್ಯವಹಾರಗಳನ್ನು ನಿಲ್ಲಿಸಿ ಎಲ್ಲಾ ಆಸ್ಪತ್ರೆಗಳಿಗೆ ವೆಂಟಿಲೇಟರ್, ಬೆಡ್, ವ್ಯವಸ್ಥೆ ಆದಷ್ಟು ಜನರನ್ನು ಬದುಕಿಸುವುದಕ್ಕೆ ಪ್ರಯತ್ನಿಸಿ. ಸಾರ್ವಜನಿಕರು ಸರಕಾರ ಹೇಳಲಿ ಹೇಳದೇ ಇರಲಿ ನಾವು ಜಾಗ್ರತೆಯಲ್ಲಿರುವುದು ನಮ್ಮ ಕರ್ತವ್ಯ. ಮಾಸ್ಕ್ ಹಾಕಿಕೊಳ್ಳಿ, ಮಾಸ್ಕ್ ಹಾಕದೇ ಇದ್ರೆ ಏನು ಬರುವುದಿಲ್ಲ ಅನ್ನುವಂತಹ ಉಢಾಪೆ ಬೇಡ, ಸ್ವಲ್ಪ ಅಂತರವನ್ನು ಕಾಪಾಡಿಕೊಳ್ಳಿ, ತಿನ್ನುವ ಆಹಾರದಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಮಾಡುವಂತಹ ಆಹಾರಗಳನ್ನು ಸೇವಿಸಿ,ಅನಗತ್ಯವಾಗಿ ಹೊರಗಡೆ ಹೋಗುವುದು ಬೇಡ, ಈಗಿನ ಪರಿಸ್ಥಿತಿಗಳನ್ನು ನೋಡಿದಾಗ ನಮ್ಮ ನಮ್ಮ ರಕ್ಷಣೆಯನ್ನು ನಾವು ಮಾಡಿಕೊಳ್ಳಾ ಬೇಕಾಗುತ್ತದೆ ಅದಕ್ಕಾಗಿ ಆದಷ್ಟು ಜಾಗ್ರತೆಯನ್ನು ವಹಿಸಿ, ಮಾಸ್ಕ್ ನ್ನು ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ.
🖋️. ಶಕುಂತಲಾ ಟಿ. ಶೆಟ್ಟಿ, ಮಾಜಿ ಶಾಸಕರು, ಪುತ್ತೂರು ವಿಧಾನ ಸಭಾ ಕ್ಷೇತ್ರ
ನಿಮ್ಮ ಅಭಿಪ್ರಾಯ ಬರೆಯಿರಿ ⏩ zoominputtur@gmail.com