ಕಳೆದ ವರ್ಷ ವ್ಯಾಪಿಸಿಕೊಂಡ ಕೊರೊನ ಸಾಂಕ್ರಾಮಿಕ ರೋಗವನ್ನು ತಡೆಯುವರೇ ಕೈಗೊಂಡ ಅವೈಜ್ಞಾನಿಕ ಕ್ರಮಗಳಿಂದಾಗಿ ಹಾಗೂ ಬಳಿಕದ ದಿನದಲ್ಲಿ ಇದರ ಕುರಿತು ಮಾಡಿರುವ ಘೋರ ನಿರ್ಲಕ್ಷ, ಹಾಗು ಬಿಜೆಪಿ ಸರಕಾರಗಳ ದುರಾಡಳಿತದ ವ್ಯವಸ್ಥೆಗಳಿಂದ,ಮತ್ತು ಕೇಂದ್ರ ಸರಕಾರವು ವಿವಿಧ ರಾಜ್ಯಗಳ ಚುನಾವಣೆ, ಉಪ ಚುನಾವಣೆ ಗಳನ್ನು ಮುಂದೂಡದೆ ನಡೆಸಿರೋದು, ಈ ಚುನಾವಣೆಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಲಕ್ಷಾಂತರ ಜನರನ್ನು ಸೇರಿಸಿ ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿ, ಸಚಿವರುಗಳೆಲ್ಲ ಚುನಾವಣ ಪ್ರಚಾರ ಸಭೆ ನಡೆಸಿರುವುದು ಹಾಗು ಧಾರ್ಮಿಕ, ಸಾಮಾಜಿಕ, ರಾಜಕೀಯ ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮ ಪಾಲನೆಗೆ ಸರಕಾರದ ನಿರ್ಲಕ್ಷ ಮೊದಲಾದವುದವುಗಳಿಂದ ಕೊರೊನ 2 ನೇ ಅಲೆ ಸುನಾಮಿಯಂತೆ ಅಪ್ಪಳಿಸಲು ಕಾರಣವಾಗಿರುತ್ತದೆ.
ಕೊರೊನ 1ನೇ ಅಲೆಯಿಂದ ದೇಶದಲ್ಲಿ ಆದ ಜನರ ಸಾವು ನೋವುಗಳ ಬಗ್ಗೆ ತಿಳಿದಿದ್ದರು ಕೇಂದ್ರ ಸರಕಾರ, ಮುಂಜಾಗ್ರತೆಯಾಗಿ ಹೊಸ ಆಸ್ಪತ್ರೆಗಳ ನಿರ್ಮಾಣ, ವೈದ್ಯಕೀಯ ಸೌಲಭ್ಯಗಳ ಸುಧಾರಣೆ, ಆಸ್ಪತ್ರೆಗಳಿಗೆ ಸತತವಾಗಿ ಆಕ್ಸಿಜನ್ ಪೂರೈಕೆ, ಆಂಬುಲೆನ್ಸ್ ಗಳ ವ್ಯವಸ್ಥೆ, ದೇಶದ ಎಲ್ಲಾ ಆಸ್ಪತ್ರೆಗಳಲ್ಲಿ ಹೆಚ್ಚಿನ ವೆಂಟಿಲೇಟರ್ ಗಳ ಅಳವಡಿಕೆಗೆ ಮುಂದಾಗದೆ ರಾಜಕೀಯ ಮಾಡುವುದರಲ್ಲೆ ಕಾಲಹರಣ ಮಾಡಿ ಜನರ ಬದುಕಿನಲ್ಲಿ ಚೆಲ್ಲಾಟವಾಡಿದ್ದೆ ಈಗ ನಡೆಯುತ್ತಿರುವ ಈ ಎಲ್ಲಾ ದುರಂತಗಳಿಗೆ ಕಾರಣ.
ಕೊರೊನ ಸಾಂಕ್ರಾಮಿಕ ರೋಗದ ಬಗ್ಗೆ ನಿರ್ಲಕ್ಷ ವಹಿಸಿದ್ದಾರೆ. ಈಗ ದೇಶದ ಪರಿಸ್ಥಿತಿ ಹೇಗಿದೆ ಎಂದರೆ ರೋಗಿಗಳು ಆಕ್ಸಿಜನ್ ಇಲ್ಲದೆ ಸಾಯುತ್ತಿದ್ದಾರೆ, ಕೇಂದ್ರ ಸರಕಾರ ಪೂರೈಕೆ ಮಾಡಿರುವ ವೆಂಟಿಲೇಟರ್ ಗಳು ಕಳಪೆಯಾಗಿದ್ದು,ಉಪಯೋಗಕ್ಕೆ ಇಲ್ಲದಂತಾಗಿದೆ, ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಜನ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಈ ರೀತಿ ಸರಕಾರದ ವೈಫಲ್ಯ ದಿಂದ ಜನರು ಸಾಯುತ್ತಿದ್ದರು, ಜನರ ಜೀವ ಉಳಿಸಲು ವಿಫಲವಾಗಿದೆ. ಈ ಕೊರೊನ 2ನೇ ಅಲೆಯು ಅತ್ಯಂತ ಅಪಾಯಕಾರಿಯಾಗಿದ್ದುಜನರು ಸರಕಾರಗಳನ್ನು ನಂಬದೆ, ತಮಗೆ ಸೋಂಕು ಹರಡದಂತೆ ತಾವೇ ಜಾಗ್ರತೆ ವಹಿಸಬೇಕಾಗಿದೆ, ಮಾಸ್ಕ್, ಸಾನಿಟೈಸರ್ ಗಳನ್ನು ಬಳಸಿ, ಸಾಮಾಜಿಕ ಅಂತರಗಳನ್ನು ಪಾಲಿಸಿ ಕೊಂಡು, ತಮ್ಮ ಆರೋಗ್ಯ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಮನವಿ ಮಾಡುತ್ತಿದ್ದೇನೆ.
✒️. ಎಚ್ ಮಹಮ್ಮದ್ ಅಲಿ, ಅಧ್ಯಕ್ಷರು ನಗರ ಕಾಂಗ್ರೆಸ್ ಸಮಿತಿ, ಪುತ್ತೂರು ದ ಕ
ನಿಮ್ಮ ಅಭಿಪ್ರಾಯ ಬರೆಯಿರಿ ⏩ zoominputtur@gmail.com