ಪುತ್ತೂರು : ಕೋವಿಡ್ 19 ವೈರಸ್ ಎರಡನೇ ಅಲೆ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕಾರಣ, ಪುತ್ತೂರು ಆಸುಪಾಸಿನ ಜನರಿಗೆ ದಿನದ 24 ಗಂಟೆ ತುರ್ತು ವೈದ್ಯಕೀಯ ಸೌಲಭ್ಯ ನೀಡುವುದಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾ ಭಾರತಿ ಪುತ್ತೂರು ವತಿಯಿಂದ ಟೆಲಿ ಕನ್ಸಲ್ಟೆನ್ಸಿ ಸೌಲಭ್ಯ ಕಲ್ಪಿಸಲಾಗಿದೆ.
ಖ್ಯಾತ ವೈದ್ಯರುಗಳಾದ ಡಾ. ಸುರೇಶ್ ಪುತ್ತೂರಾಯ, ಡಾ. ಶ್ರೀಪತಿ ರಾವ್, ಡಾ. ಶ್ಯಾಮ್, ಡಾ. ಸುಧಾ ರಾವ್, ಡಾ ಸೂರ್ಯನಾರಾಯಣ್ ಅವರು ಫೋನ್ ಮುಖಾಂತರ ಸೇವೆಗೆ ಲಭ್ಯವಿರುತ್ತಾರೆ. ಟೆಲಿ ಕನ್ಸಲ್ಟೆನ್ಸಿ ಸೌಲಭ್ಯದ ಅವಶ್ಯಕತೆ ಇರುವವರು 7204402108 ಗೆ ಕರೆ ಮಾಡಬಹುದು ಎಂದು ಸೇವಾ ಭಾರತಿ ಪ್ರಮುಖರಾದ ಕೇಶವ ಪ್ರಸಾದ್ ಮುಳಿಯ ಹಾಗೂ ಡಾ. ಕೃಷ್ಣಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.