ಪುತ್ತೂರು: ಕೊರೊನಾ ಮಹಾಮಾರಿಯಿಂದ ದೇಶವೇ ತತ್ತರಿಸಿದೆ. ನಮ್ಮ ಸುರಕ್ಷತೆಗಾಗಿ ಸರಕಾರದ ನೀತಿ ನಿಯಮಗಳನ್ನು ಪಾಲಿಸುವುದು ಅತ್ಯವಶ್ಯಕವಾಗಿದೆ. ಜೀವ ಹಾಗೂ ಜೀವನ ಎರಡೂ ಮುಖ್ಯವಾಗಿರುವ ಈ ಸಂದರ್ಭದಲ್ಲಿ ನಮ್ಮ ( ವಾರ್ಡಿಗೆ ಸಂಬಂಧಿಸಿದಂತೆ)ತುರ್ತು ಸೇವೆಗೆ ನಾವು ಸಿದ್ದರಿದ್ದೇವೆ… ಔಷಧಿ, ದಿನನಿತ್ಯ ಬಳಕೆ ವಸ್ತುಗಳಿಗೆ ತೊಂದರೆಯಾದಲ್ಲಿ ನಮ್ಮನ್ನು ಸಂಪರ್ಕಿಸಿ ಎಂದು ಜಯಪ್ರಕಾಶ್ ಬದಿನಾರು ಸದಸ್ಯರು, ಗ್ರಾಮ ಪಂಚಾಯತ್,ಕೋಡಿಂಬಾಡಿ ,ಪುತ್ತೂರು ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಡ್ಡಾಯವಾಗಿ ಮಾಸ್ಕ್ ಧರಿಸಿ ಹಾಗೂ ಸಾಮಾಜಿಕ ಅಂತರ ಕಾಪಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂದು ಅವರು ಹೇಳಿದ್ದಾರೆ.