ಪುತ್ತೂರು: ಪುತ್ತೂರಿನ ನಾಗರೀಕರಿಗೆ ಸರಳ ವ್ಯಾಯಮದ ಮೂಲಕ ತಮ್ಮ ದೇಹದ ಫಿಟ್‌ನೆಸ್ ಕಾಪಾಡಿಕೊಳ್ಳುವುದು ಸರಿಯಾದ ಆಹಾರ ಸೇವನೆಯೊಂದಿಗೆ ಸರಿಯಾದ ವ್ಯಾಯಾಮ, ದೇಹಕ್ಕೆ ದಿನದಲ್ಲಿ ಒಂದು ಗಂಟೆಯಾದರೂ ವ್ಯಾಯಾಮ ಅತ್ಯಗತ್ಯ ಎಂಬ ಉದ್ದೇಶವಿಟ್ಟು ಕೊಂಡು ರೋಟರಿ ಕ್ಲಬ್ ಪುತ್ತೂರು ಯುವದಿಂದ ಸಂತ ಫಿಲೋಮಿನಾ ಕಾಲೇಜಿನ ಸಹಯೋಗದೊಂದಿಗೆ ೨೧ ದಿನಗಳ ಕಾಲ ನಡೆಯುವ ಫಿಟ್ ಪುತ್ತೂರು ಮಿಶನ್ ಕಾರ್ಯಕ್ರಮಕ್ಕೆ ನ.1 ರಂದು ಸಂತ ಫಿಲೋಮಿನಾ ಕಾಲೇಜಿನ ಸಿಲ್ವರ್ ಜ್ಯುಬ್ಲಿ ಹಾಲ್‌ನಲ್ಲಿ ಚಾಲನೆ ನೀಡಲಾಯಿತು.
ಎ.ಎಸ್ಪಿ ಲಖನ್ ಸಿಂಗ್ ಯಾದವ್ ಕಾರ್ಯಕ್ರಮ ಉದ್ಘಾಟಿಸಿದರು, ಸಂತ ಪಿಲೋಮಿನಾ ವಿದ್ಯಾಸಂಸ್ಥೆಯ ಕ್ಯಾಂಪಸ್ ನಿರ್ದೇಶಕ ಪ್ರಕಾಶ್ ಮೊಂತೆರೋ, ರೋಟರಿ ಯುವ ಜಿಲ್ಲಾ ಗರ್ವನರ್ ರತ್ನಾಕರ ರೈ ಕೆದಂಬಾಡಿ ಗುತ್ತು, ಜಿಲ್ಲಾ ಚಯರ್‌ಮೆನ್ ಸಂತೋಷ್ ಶೆಟ್ಟಿ, ಜಿಲ್ಲಾ ಪ್ರೋಜೆಕ್ಟರ್ ಕಾರ್ಯದರ್ಶಿ ಆಸ್ಕರ್ ಆನಂದ್, ರೋಟರಿ ಪೂರ್ವದ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ, ಸಚ್ಚಿದಾನಂದ ಮತ್ತಿತರರು ಉಪಸ್ಥಿತರಿದ್ದರು. ರೋಟರಿ ಪುತ್ತೂರು ಯುವದ ಅಧ್ಯಕ್ಷ ಡಾ. ಹರ್ಷಕುಮಾರ್ ರೈ ಮಾಡಾವು ಸ್ವಾಗತಿಸಿ, ಪಶುಪತಿ ಶರ್ಮ ಕಾರ್ಯಕ್ರಮ ನಿರೂಪಿಸಿದರು.