ಪುತ್ತೂರು: ಉತ್ಕೃಷ್ಟ ಗುಣಮಟ್ಟದ ಸೇವೆಯ ಮೂಲಕ ಕೋಳಿಗಳ ಸಾಕಾಣಿಕೆ ಮತ್ತು ಮಾರಾಟ ಉದ್ಯಮದಲ್ಲಿ ಅನುಭವ ಹೊಂದಿರುವ ಉದ್ಯಮಿ ಜಯಂತ್ ನಡುಬೈಲು ಮಾಲಕತ್ವದ ಅಕ್ಷಯ ಗ್ರೂಪ್ ತನ್ನ 6ನೇ ಶಾಖೆಯನ್ನು ಕೆಯ್ಯೂರಿನಲ್ಲಿ ಪ್ರಾರಂಭಿಸಿದೆ.
ಅ.30 ರಂದು ಕೆಯ್ಯೂರಿನ ವಿಶ್ವಚೇತನ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊAಡ ಈ ನೂತನ ಸಂಸ್ಥೆಯನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು. ಅತಿಥಿಗಳಾಗಿ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಭಾರತ್ ಆಗ್ರೋ ಇಂಡಸ್ಟಿçÃಸ್ ಮಂಗಳೂರು ಇದರ ಆಡಳಿತ ನಿರ್ದೇಶಕ ಅರುಣ್‌ಕುಮಾರ್, ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಎಸ್.ಬಿ ಜಯರಾಮ ರೈ ಬಳಜ್ಜ, ಕೆಯ್ಯೂರು ವಿಶ್ವಚೇತನ ಕಾಂಪ್ಲೆಕ್ಸ್ ಮಾಲಕ ವಿಶ್ವನಾಥ ಪೂಜಾರಿ ಕೆಂಗುಡೇಲು, ಕೆಯ್ಯೂರು ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಬ್ದುಲ್‌ಖಾದರ್ ಮೇರ್ಲ, ಕೆಯ್ಯೂರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಜಯಂತ್ ಕೆಂಗುಡೇಲು ಭಾಗವಹಿಸಿದರು.