ಏಕದಿನ ವಿಶ್ವಕಪ್ನ 15ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡದ ವಿರುದ್ಧ ನೆದರ್ಲೆಂಡ್ಸ್ ಭರ್ಜರಿ ಗೆಲುವು ಸಾಧಿಸಿದೆ.
ಧರ್ಮಶಾಲಾದ ಹೆಚ್ಪಿಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡವು ಬೌಲಿಂಗ್ ಆಯ್ದುಕೊಂಡಿತು.
ಮಳೆಯಿಂದಾಗಿ ತಲಾ 43 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೆದರ್ಲೆಂಡ್ಸ್ 245 ರನ್ ಗಳಿಸಿತು. ಇದನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೇವಲ 207 ರನ್ಗಳಿಗೆ ಸರ್ವಪತನ ಕಂಡು ಸೋಲಿಗೆ ಶರಣಾಯ್ತು.
ಈ ಮೂಲಕ ವಿಶ್ವಕಪ್ನಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ಸಿಕ್ಕಿದೆ. ನೆದರ್ಲೆಂಡ್ ಅನ್ನು ಲಘುವಾಗಿ ಪರಿಗಣಿಸಿದ ದಕ್ಷಿಣ ಆಫ್ರಿಕಾ, ಬೆಲೆ ತೆತ್ತಿದೆ.
ಕ್ರಿಕೆಟ್ನಲ್ಲಿ ಬಲಿಷ್ಠ ತಂಡಗಳ ಎದುರು ಗೆದ್ದಿದ್ದ ದಕ್ಷಿಣ ಆಫ್ರಿಕಾ, ಕ್ರಿಕೆಟ್ ಕೂಸು ನೆದರ್ಲೆಂಡ್ ವಿರುದ್ಧ ಸೋತು ಮುಜುಗರ ಅನುಭವಿಸಿದೆ. ವಿಶ್ವಕಪ್ನಲ್ಲಿ ಮೂರು ಪಂದ್ಯಗಳನ್ನು ಆಡಿರುವ ದಕ್ಷಿಣ ಆಫ್ರಿಕಾ, ಎರಡರಲ್ಲಿ ಗೆದ್ದು ಒಂದು ಪಂದ್ಯವನ್ನು ಸೋತಿದೆ. ಇನ್ನು ನೆದರ್ಲೆಂಡ್ ಮೂರು ಪಂದ್ಯಗಳನ್ನು ಆಡಿ, ಎರಡರಲ್ಲಿ ಸೋತಿದೆ..

























