ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಪಂದ್ಯ ಪಂದ್ಯದ ವೇಳೆ ವಿದೇಶಿ ಪ್ರಜೆಯೊಬ್ಬ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ.
ನ್ಯೂಜಿಲೆಂಡ್ ಬ್ಯಾಟಿಂಗ್ ವೇಳೆ ಈ ಘಟನೆ ನಡೆದಿದೆ.
ಆಸಿಸ್ ಪ್ಲೇಯರ್ಸ್ ಬೌಂಡ್ರಿಲೈನ್ ಬಳಿ ಫೀಲ್ಡಿಂಗ್ಗೆ ಬರುತ್ತಿದ್ದಂತೆ ವಿದೇಶ ಪ್ರಜೆ ಜೈ ಶ್ರೀರಾಮ್ ಎಂದು ಹೇಳಿದ್ದಾನೆ. ಈ ವೇಳೆ ವ್ಯಕ್ತಿಯ ಜೊತೆಗೆ ಸ್ಟೇಡಿಯಂನಲ್ಲಿ ಕುಳಿತ ಜನರು ಸಹ ಧ್ವನಿಗೂಡಿಸಿದ್ದಾರೆ.
ಮಾತ್ರವಲ್ಲದೆ, ಜೈ ಶ್ರೀರಾಮ್ ಎಂದು ಕೂಗುವ ವೇಳೆ ಕೆಲವರು ಮೊಬೈಲ್ ಹಿಡಿದು ಫೋಟೋ ಮತ್ತು ವಿಡಿಯೋ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆಗ ಭಾರತ್ ಮಾತಾ ಕೀ ಜೈ ಎಂದು ಕೂಗಿದ್ದಾರೆ. ಬಳಿಕ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿವ ಮೂಲಕ ಎಲ್ಲರನ್ನು ಅಚ್ಚರಿಗೊಳ್ಳುವಂತೆ ಮಾಡಿದ್ದಾರೆ.


























