ಪುತ್ತೂರು: ಸುಮಾರು 50 ವರ್ಷಗಳಿಂದ ರಸ್ತೆಯಿಲ್ಲದ ಪ್ರದೇಶವೊಂದಕ್ಕೆ ಮುಂಡೂರು ಗ್ರಾ.ಪಂ ಸದಸ್ಯರು ಹಾಗೂ ಪುತ್ತಿಲ ಶ್ರೀರಾಮ ಗೆಳೆಯರ ಬಳಗದ ಪರಿಶ್ರಮದ ಮೂಲಕ ರಸ್ತೆ ನಿರ್ಮಿಸಿಕೊಟ್ಟು ಆ ಭಾಗದ ಜನರ ಸುಧೀರ್ಘ ಸಮಯಗಳ ಬೇಡಿಕೆಯೊಂದು ಈಡೇರಿಸಿದ್ದಾರೆ.
ಮುಂಡೂರು ಗ್ರಾಮದ 1ನೇ ವಾರ್ಡ್ ನಲ್ಲೊಂದು ರಸ್ತೆ ನಿರ್ಮಾಣವಾಗಿದ್ದು, ಸುಮಾರು 50ವರ್ಷ ಗಳಿಂದ ಸುಮಾರು 40ಕ್ಕಿಂತಲೂ ಮೀರಿ ಪರಿಶಿಷ್ಟ ವರ್ಗ, ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತ ಕ್ರಿಶ್ಚಿಯನ್, ಸಮುದಾಯದ ಮನೆಗಲಿರುವ ಜಾಗವಾಗಿದೆ.
ಈ ಮನೆಗಳಿಗೆ ನಡೆದು ಹೋಗುವುದೇ ದುಸ್ತರ. ಒಂದು ಅಂಗವಿಕಲ ಮಗು ಇರುವ ಮನೆ ಇದ್ದು, ದೈನಂದಿನ ದುಡಿಮೆಯೇ ಇವರ ಜೀವನ. ಈ ಸಂದರ್ಭದಲ್ಲಿ ಅಸೌಖ್ಯದಿಂದ ಬಳಲಿದ ಸಂದರ್ಭದಲ್ಲಿ ರೋಗಿಯನ್ನು ಎತ್ತಿಕೊಂಡೆ ಹೋಗಬೇಕಾದ ದಯಾನೀಯ ಸ್ಥಿತಿಯನ್ನು ಕಂಡು ಜನಪ್ರತಿನಿದಿಗಳನ್ನು ಮುಂದಿಟ್ಟುಕೊಂಡು ಈ ಸಮಸ್ಯೆಯನ್ನು ಸಂಬಂಧ ಪಟ್ಟವರ ಜೊತೆ ಮಾತುಕತೆ ನಡಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟವರು ಅರುಣ್ ಕುಮಾರ್ ಪುತ್ತಿಲ ಮತ್ತು ಅವರ ಶ್ರೀರಾಮ ಗೆಳೆಯರ ಬಳಗದ ಸರ್ವ ಸದಸ್ಯರುಗಳು.
ಕಳೆದ ಗ್ರಾಮ ಪಂಚಾಯತ್ ಚುನಾವಣಾ ಸಂದರ್ಭದಲ್ಲಿ ಈ ವಾರ್ಡಿನಲ್ಲಿ ಅಧಿಕ ಬಹುಮತದಿಂದ ಗೆದ್ದ ವಾರ್ಡ್ ನ ಪ್ರತಿನಿಧಿಗಳಾಗಿರುವ ಬಾಲಕೃಷ್ಣ ಪೂಜಾರಿ, ಅಶೋಕ್ ಪುತ್ತಿಲ,ಶ್ರೀಮತಿ ಪುಷ್ಪಲತಾ ಪುರಂದರ, ಶ್ರೀಮತಿ ಅರುಣಾ ಅನಿಲ್ ಕಣ್ಣರ್ನೂಜಿ. ಈ ರಸ್ತೆಯ ವಿಚಾರದಲ್ಲಿ ಪಟ್ಟ ಬಹಳಷ್ಟು ಶ್ರಮದ ದ್ಯೋತಕವಾಗಿ ಈ ದಿನ ರಸ್ತೆ ವಾಹನ ಸಂಚಾರಕ್ಕೆ ಸಿದ್ದವಾಗಿದೆ.
ಅನೇಕ ವರ್ಷಗಳ ಸುದೀರ್ಘ ಹೋರಾಟ ಜನ ಪ್ರತಿನಿಧಿಗಳಿಗೆ ಇಚ್ಚಾ ಶಕ್ತಿ ಇದ್ದಲ್ಲಿ ಯಾವುದೇ ಕೆಲಸವನ್ನು ಮಾಡೋದಕ್ಕೆ ಸಾಧ್ಯ ಇದೆ ಅನ್ನೂ ಸಂದೇಶ ಸಮಾಜಕ್ಕೆ ಕೊಟ್ಟಿದೆ. ಇವರ ಸೇವಾ ಮನೋಭಾವದ ಹಿಂದೆ ಸಾಮಾಜಿಕ ಕಳಕಳಿಯ ಶ್ರೀರಾಮ ಗೆಳೆಯರ ಬಳಗ ಎಂಬ ಸಂಘಟನೆ ಗಟ್ಟಿಯಾಗಿ ನಿಂತಿದ್ದು, ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿದಿನ ಸುಮಾರು 50ಕ್ಕಿಂತಲೂ ಹೆಚ್ಚಿನ ಸದಸ್ಯರು ಪ್ರತಿನಿತ್ಯ ಶ್ರಮ ದಾನ ಮಾಡುವುವುದರ ಮೂಲಕ ಈ ರಸ್ತೆಗೆ ಕಾಯಕಲ್ಪ ತಂದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಈ ವಾರ್ಡಿನ ಸದಸ್ಯೆ ಪ್ರಸ್ತುತ ಪಂಚಾಯತ್ ನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು ಅನುದಾನ ನೀಡಿ ಈ ಕೇದಾಗೆದಡಿ, ನಡುಗುಡ್ಡೆ, ಪುಲಿಂಕೇತಡಿ,ಬರೆಕೋಲಾಡಿ, ಕಲ್ಲಮ ಸಂಪರ್ಕ ರಸ್ತೆಯಾಗಬಹುದು ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಕೇಳಿಬರುತ್ತಿದೆ. ಅಂತೂ ಲಾಕ್ ಡೌನ್ ಕೆಲವರಿಗೆ ನೋವು ತಂದಿದ್ದಾರೆ. ಈ ರಸ್ತೆಯ ಫಲಾನುಭವಿಗಳ ಮುಖದಲ್ಲಿ ಸಂತಸದ ನಗು ತಂದಿದೆ.