ಮುಖ್ಯ ಮಂತ್ರಿಗಳಾದ ಯಡಿಯೂರಪ್ಪ ನವರು ಕೋವಿಡ್ ಬಂದ ನಂತರ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತವಾಗಿ ಊಟ ನೀಡಬೇಕು ಎಂದು ಆದೇಶ ಕೊಟ್ಟಿದ್ದರು, ಈ ಆದೇಶ ಬಂದ ನಂತರ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತವಾಗಿ ಊಟ ನೀಡುವ ವ್ಯವಸ್ಥೆ ಮಾಡಲಾಗಿದೆ. ಸರಕಾರದ ಸುತ್ತೋಲೆಯ ಪ್ರಕಾರ ಪಾರ್ಸೆಲ್ ವ್ಯವಸ್ಥೆ ಮಾತ್ರ ಇದ್ದು, ಅಲ್ಲಿ ಕುಳಿತು ಊಟ ಮಾಡುವ ವ್ಯವಸ್ಥೆ ಇಲ್ಲಾ. ಬಿಒ ಆಫೀಸ್ ನಿಂದ ಬರುತ್ತಿರುವಾಗ ಶಾಸಕರು ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿದ್ದು, ಭೇಟಿ ನೀಡಿ ರೆಜಿಸ್ಟರ್ ಅನ್ನು ಗಮನಿಸಿ ಎಷ್ಟು ಊಟ ಹೋಗುತ್ತದೆ ಎಂದು ಕೇಳಿದಾಗ ಅದರಲ್ಲಿ 79 ಜನರ ಹೆಸರು ಮತ್ತು ಫೋನ್ ನಂಬರ್ ಇದ್ದು, ಅದರ ಎದುರುಗಡೆ ಎಷ್ಟು ಊಟ ಪಾರ್ಸೆಲ್ ಕೊಡಲಾಗಿದೆ ಎಂದು ಸಂಖ್ಯೆ ಬರೆಯಲಾಗಿತ್ತು.
ಏಕವ್ಯಕ್ತಿಯ ಹೆಸರಿನಲ್ಲಿ 8 ಕ್ಕಿಂತಾ ಅಧಿಕ ಊಟ ಪಾರ್ಸೆಲ್ ಹೋಗುತ್ತಿದ್ದೂ, ಯಾರು ಎಂದು ಕೇಳುವಾಗ ನಮಗೆ ಗೊತ್ತಿಲ್ಲ, ನಾವು ಪಾರ್ಸೆಲ್ ಬಂದ ವ್ಯಕ್ತಿಗೆ ಪಾರ್ಸೆಲ್ ಕೊಡುವುದಾಗಿ ಅಲ್ಲಿನ ಅಧಿಕಾರಿಗಳು ಹೇಳಿದ್ದು, ಅದನ್ನು ಮೇಲ್ವಿಚಾರಣೆ ಮಾಡುವವರು ನಗರ ಸಭೆಯವರಾದ ಕಾರಣ ನಗರ ಸಭೆ ಅಧ್ಯಕ್ಷರ ಹತ್ತಿರ ಅದನ್ನು ಸ್ವಲ್ಪ ವಿಚಾರಿಸಿ ನೋಡಿ ಎಂದು ಶಾಸಕರು ಹೇಳಿದರು. ಯಾಕೆಂದರೆ ಇಷ್ಟು ಊಟ ಎಲ್ಲಿಗೇ ಹೋಗುವಂತದ್ದು, ಬಡವರಿಗೆ ಊಟ ಮಾಡ್ಲಿಕ್ಕೆ ಹೋಗುತ್ತಿದೆಯಾ ಅಥವಾ ಬೇರೆ ದುರುಪಯೋಗವಾಗುತ್ತಿದೆಯಾ ಅದರ ಬಗ್ಗೆ ಸ್ವಲ್ಪ ಪರಿಶೀಲನೆ ಮಾಡಿ ಎಂದು ಶಾಸಕರು ಹೇಳಿದ್ದೇ ಹೊರತು ಬಡವರಿಗೆ ಕೊಡುವ ಊಟದ ಬಗ್ಗೆ ಮೇಲ್ವಿಚಾರಣೆ ಮಾಡಿದ್ದು ಅಲ್ಲಾ ಎಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜಾ ರಾಧಾಕೃಷ್ಣ ಆಳ್ವ ರವರು ಸ್ಪಷ್ಟನೆ ನೀಡಿದ್ದಾರೆ. ಊಟ ದುರುಪಯೋಗವಾಗದೇ ಅದರ ನಿಜವಾದ ಫಲಾನುಭವಿಗಳಿಗೆ ದೊರೆಯಬೇಕೆಂಬುದು ಶಾಸಕರ ಆಶಯವಾಗಿದೆ ಎಂದು ಅವರು ಹೇಳಿದರು.