ಸಣ್ಣ ಪ್ರಯತ್ನದಿಂದಲೇ ಸಾಧನೆಯ ಹಾದಿಯ ಮೆಟ್ಟಿಲನ್ನು ಹತ್ತಲು ಪ್ರತಿಯೊಂದು ಪ್ರತಿಭೆಗಳಿಗೆ ಮೊದಲ ಹೆಜ್ಜೆ ಆಗಿರುತ್ತದೆ. ಕಲೆ ಎಂಬುದು ಹುಟ್ಟಿನಿಂದಲೇ ಬರುವುದು ಅಲ್ಲ. ನಮ್ಮ ಆಸಕ್ತಿಯ ಮೇಲೆ ಇರೋದು. ನಮಗೆ ಆಸಕ್ತಿ ಎನ್ನುವುದು ಸಣ್ಣ ವಯಸ್ಸಿನಲ್ಲೇ ಬರಬೇಕು ಆಗ ಸಾಧನೆಯ ಒಂದು ಮೆಟ್ಟಿಲನ್ನು ಏರಲು ಸುಲಭವಾಗುತ್ತದೆ.
ಹೆಣ್ಣುಮಕ್ಕಳು ಎಂದಾಗ ಕೆಲವರ ಮನಸ್ಸಲ್ಲಿ ಆಕೆ ಏನು ಸಾಧನೆ ಮಾಡುತ್ತಾಳೆ ಎನ್ನುವುದು ಬರುತ್ತದೆ. ಆದರೆ ನಮ್ಮ ಸಮಾಜದಲ್ಲಿ ಇವಾಗ ಹೆಣ್ಣು ಮಕ್ಕಳ ಕೈ ಕೂಡ ಮೇಲೆ ಆಗಿದೆ. ಹೆಣ್ಣು ಮಕ್ಕಳು ಕೂಡ ಹಲವಾರು ಸಾಧನೆಗಳನ್ನು ಮಾಡಿದ್ದಾರೆ. ಸಮಾಜದಲ್ಲಿ ತಾನು ಕೂಡ ಗುರುತಿಸುವಂತೆ ಆಗಬೇಕು ಎಂದು ಹೆಣ್ಣುಮಕ್ಕಳು ಹಲವಾರು ಕಲೆಗಳಲ್ಲಿ ಮಿಂಚೂಣಿಯಾಗಿದ್ದಾರೆ. ಅದರಲ್ಲೂ ಇಲ್ಲೊಂದು ಹೆಣ್ಣು ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿ ಅದ್ಭುತವಾದ ವರ್ಣಚಿತ್ರಗಳನ್ನು ಬಿಡಿಸುತ್ತಾರೆ.
ಈಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕೂರು ನಲ್ಲಿ ಮತ್ತು ಪ್ರೌಢ ಶಾಲೆಯನ್ನು ನವೋದಯ ಶಾಲೆ ಬೆಟ್ಟಂಪ್ಪಾಡಿ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಬೆಟ್ಟಂಪ್ಪಾಡಿ ಇಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಸಂಗ ಮಾಡಿ ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪ್ಪಾಡಿ ಯಲ್ಲಿ ಬಿ ಎಸ್ ಡಬ್ಲ್ಯೂ ಕಲಿಯುತ್ತಿದ್ದು, ಇವರು ಪುತ್ತೂರು ತಾಲೂಕಿನ ಬೆಟ್ಟಂಪ್ಪಾಡಿ ಗ್ರಾಮದ ನಾಕಪ್ಪಾಡಿಯ ಮಂಜಪ್ಪ ಪೂಜಾರಿ ಹಾಗೂ ಪವಿತ್ರ ದಂಪತಿಗಳ ಪುತ್ರಿ ಅನ್ವಿತಾ.
ಸಣ್ಣವಯಸ್ಸಿನಲ್ಲೇ ಬಣ್ಣದ ಪೆನ್ಸಿಲ್ ಗಳನ್ನು ಹಿಡಿಯಲು ಶುರು ಮಾಡಿದ್ದಾರೆ. ಸಣ್ಣ ವಯಸ್ಸಿನಲ್ಲೇ ಆಸಕ್ತಿ ತೋರಿದ ಕಾರಣ ಇವರ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಂತೆ ಆಗಿದೆ. ಚಿತ್ರಕಲೆ ಅಲ್ಲದೆ ನೃತ್ಯ ಮಾಡಲು ಸೈ ಎನ್ನುವ ಇವರು ರಂಗೋಲಿ, ಲೇಖನ, ವ್ಯಕ್ತಿ ಚಿತ್ರ, ಮೆಹಂದಿ ಹೀಗೇ ಮೊದಲಾದ ಕಲೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾ ಬಂದಿದ್ದಾರೆ.
ಈಕೆ 2016-17 ನೇ ಸಾಲಿನಲ್ಲಿ ಕರ್ನಾಟಕ ಸೆಕೆಂಡರಿ ಪರೀಕ್ಷಾ ಮಂಡಳಿಯವರು ನಡೆಸಿದ ಚಿತ್ರಕಲೆಯ ಲೋವರ್ ಗ್ರೇಡ್ ಪರೀಕ್ಷೆ ಬರೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡು, ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಹಲವಾರು ಸ್ಪರ್ಧೆಗಳಲ್ಲೂ ಭಾಗವಿಸಿದ್ದಾರೆ.
ಈಕೆಗೆ ಹೆಚ್ಚು ಆಸಕ್ತಿ ಮಂಡಲ ಕಲೆಯಲ್ಲಿ ಇನ್ನು ಹೆಚ್ಚು ವಿಭಿನ್ನವಾಗಿ ರಚಿಸಬೇಕೆಂದು. ಹಾಗೆಯೇ ಹೇರ್ ಸ್ಟೈಲ್ ರಂಗು ರಂಗಿನ ರಂಗೋಲಿಯಲ್ಲೂ ಅಲ್ಲೂ ಆಸಕ್ತಿ ಹೊಂದಿರುವ ಈಕೆ ಅದ್ಬುತವಾದ ಮಂಡಲ ಚಿತ್ರಗಳನ್ನು ರಚಿಸುತ್ತಾರೆ.
ಈಕೆಗೆ ಪೆನ್, ಪೆನ್ಸಿಲ್ ಶೀಟ್ ಪೇಪರ್ ಕಂಡರೆ ಸಾಕು ಏನಾದರು ಡ್ರಾಯಿಂಗ್ ಬಿಡಿಸಬೇಕೇನ್ನುವ ಆಸಕ್ತಿ ಅದರತ್ತ ಸೆಳೆಯುತ್ತದೆ. ಡ್ರಾಯಿಂಗ್ ಎಂದರೆ ಈಕೆಗೆ ಪಂಚಪ್ರಾಣ. ಈಕೆ ಮೂರನೇ ತರಗತಿಯಲ್ಲಿರುವಾಗ ಒಂದು ಗಣಪತಿಯ ಡ್ರಾಯಿಂಗ್ ಬಿಡಿಸಿದನ್ನು ಈಕೆಯ ಶಾಲೆಯ ಸರ್ ನೋಡಿ ಪೇಪರ್ ನಲ್ಲಿ ಪ್ರಕಟ ಮಾಡಿದ್ದರು, ಅಲ್ಲಿಂದ ಈಕೆಗೆ ಚಿತ್ರ ಕಲೆಯಲ್ಲಿ ಇನ್ನು ಆಸಕ್ತಿ ಹೆಚ್ಚುತ್ತಲೇ ಹೋಯ್ತು.
ಪ್ರಸ್ತುತ ಇವರು ಸಿ ಆರ್ ಕ್ರಿಯೇಷನ್ ಎಂಬ ಯುಟ್ಯೂಬ್ ಚಾನೆಲ್ ಅಲ್ಲಿ ಸದಸ್ಯರಾಗಿದ್ದು, ಅದೇ ತಂಡದಿಂದ ಮುಂದೆ ಬರುವಂತಹ ಕಿರು ಚಿತ್ರಗಳಲ್ಲಿ ಅಭಿನಯಿಸಿ ತನ್ನ ಅಭಿನಯದ ಕಲೆಯಲ್ಲೂ ಆಸಕ್ತಿವಹಿಸಿದ್ದಾರೆ.
ಕಲೆಗೆ ಆಸಕ್ತಿ ಇರುವುದರಿಂದ ಸಣ್ಣ ವಯಸ್ಸಿನಲ್ಲಿ ತಾನೇ ಚಿತ್ರಕಲೆಯನ್ನು ಬಿಡಿಸುತ್ತ ಬಂದವರು. ನವೋದಯ ಪ್ರೌಢ ಶಾಲೆಯಲ್ಲಿ ಐ. ಗೋಪಾಲಕೃಷ್ಣರಾವ್ ವರಿಂದ ಚಿತ್ರಕಲೆ ಅಭ್ಯಾಸ ಮಾಡಿರುತ್ತಾರೆ. ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದ ಕಾರಣ ಮಂಡಲ ಚಿತ್ರ ಕಲೆಗೂ ಹೆಚ್ಚು ಒಲವು ಬಂತು ಎಂದು ಅನ್ವಿತಾರವರು ಹೇಳುತ್ತಾರೆ. ಬಹಳ ಸುಂದರವಾಗಿ ಹಾಗೂ ಚಿತ್ರಗಳತ್ತ ಮನಸೆಳೆಯುವ ಹಾಗೇ ಅಷ್ಟು ಸುಂದರವಾಗಿ ರಚಿಸುತ್ತಾರೆ. ಆಸಕ್ತಿ ಇದ್ದಾರೆ ಯಾವ ಕೆಲಸಗಳನ್ನು ಮಾಡಬಹುದು. ನಮ್ಮಲ್ಲಿ ನಂಬಿಕೆ ಮತ್ತು ಆಸಕ್ತಿ ಇರಬೇಕು. ಈಕೆಯ ಸಾಧನೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಆಶಿಸುವ.
🖋️. ರಸಿಕಾ ಮುರುಳ್ಯ
ದ್ವಿತೀಯ ಪತ್ರಿಕೋದ್ಯಮ ವಿಭಾಗ,
ವಿವೇಕಾನಂದ ಕಾಲೇಜು ಪುತ್ತೂರು.