ಪುತ್ತೂರು: ಬನ್ನೂರು ನಿವಾಸಿ ಆಟೋ ಚಾಲಕ ಜಗದೀಶ್ ಹೆಗ್ಡೆ(35ವ.)ರವರು ಜೂ.5ರಂದು ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಅವರ ಕೋವಿಡ್ ವರದಿಯು ಪಾಸಿಟಿವ್ ಆಗಿತ್ತು.
ಮೂಲತಃ ತಾರಿಗುಡ್ಡೆ ನಿವಾಸಿಯಾಗಿರುವ ಜಗದೀಶ್ ಹೆಗ್ಡೆ ಅವರು ಬನ್ನೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದು ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು.
ಅನಾರೋಗ್ಯದಿಂದಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರ ಕೋವಿಡ್ ವರದಿಯು ಪಾಸಿಟಿವ್ ಆಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಜೂ.5ರಂದು ರಾತ್ರಿ ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಪುತ್ರಿ ಮತ್ತು 9 ತಿಂಗಳ ಗಂಡು ಮಗುವನ್ನು
ಅಗಲಿದ್ದಾರೆ.


























