ತನ್ನನ್ನ ಪ್ರೀತಿಯಿಂದ ನೋಡಿಕೊಂಡ ಮಾವುತನ ಸಾವಿಗೆ ಆನೆಯೊಂದು ಕಂಬನಿ ಮಿಡಿದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಕಣ್ಣಾಲಿಗಳನ್ನ ಒದ್ದೆ ಮಾಡ್ತಿದೆ. ಹೌದು.. ಕೇರಳದ ಕೊಟ್ಟಾಯಮ್ ಜಿಲ್ಲೆಯಲ್ಲಿ ಮನಕಲಕುವ ಘಟನೆ ನಡೆದಿದೆ.
ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ದಾಮೋದರನ್ ನಾಯರ್ ವಿಧಿವಶರಾಗಿದ್ದರು. ದಾಮೋದರ್ ಅವರ ಅಂತಿಮ ದರ್ಶನ ಪಡೆಯಲು ಅವರು ಸಂಬಂಧಿಗಳು ಹಾಗೂ ಊರವರು ಬಂದಿದ್ದರು. ಈ ವೇಳೆ ಅವರು ಸಾಕಿ ಸಲುಹಿದ ಆನೆ, ಪಲ್ಲಟ್ಟು ಬ್ರಹ್ಮದಾಥನ್ ಕೂಡ ಬಂದು ಅಂತಿಮ ನಮನ ಸಲ್ಲಿಸಿದೆ.
ದಾಮೋದರನ್ ಅವರ ಮೃತ ದೇಹವನ್ನ ಮನೆಯಲ್ಲಿ ಮಲಗಿಸಲಾಗಿತ್ತು. ಅಲ್ಲಿಗೆ ಆಗಮಿಸಿದ ಆನೆ, ಮೊದಲು ತಲೆಯಾಡಿಸಿದೆ. ನಂತರ ಸೊಂಡಿಲು ಆಡಿಸುತ್ತ ಕಂಬನಿ ಮಿಡಿದಿದೆ. ಈ ವೇಳೆ ಮೃತನ ಸಂಬಂಧಿಯೊಬ್ಬರು ಆನೆಯನ್ನ ಸಂತೈಸಲು ಮುಂದಾಗುತ್ತಾರೆ. ಪಾರ್ಥೀವ ಶರೀರದ ದರ್ಶನ ಪಡೆದ ಆನೆ ಭಾರವಾದ ಮನಸ್ಸಿನಿಂದ ವಾಪಸ್ ಹೊರಟಿದೆ.
ದಾಮೋದರ್ ಅವರು ಕಳೆದ 60 ವರ್ಷಗಳಿಂದ ಆನೆಗಳಿಗೆ ಟ್ರೈನಿಂಗ್ ನೀಡುತ್ತಿದ್ದರು. ಬ್ರಹ್ಮದಾಥನ್ ಆನೆಗೆ 25 ವರ್ಷಗಳ ಕಾಲ ಮಾವುತರಾಗಿದ್ದರು. ಹಲವಾರು ಸಭೆ, ಸಮಾರಂಭಗಳಲ್ಲಿ ಈ ಆನೆಯ ಜೊತೆಗೆ ದಾಮೋದರ್ ಭಾಗವಹಿಸಿದ್ದರು. ನಂತರ ಅದನ್ನ ಮನೋಜ್ ಮತ್ತು ರಾಜೇಶ್ ಪಲ್ಲಟ್ಟು ಅನ್ನೋರು ಖರೀದಿ ಮಾಡಿದ್ದರು. ದಾಮೋದರ್ ಅವರ ನೆಚ್ಚಿನ ಆನೆ ಇದಾಗಿತ್ತು. ಅವರು ಸಾಯುವ ಮೊದಲು ಈ ಆನೆಯನ್ನ ನೋಡಲು ಬಯಸಿದ್ದರು ಎನ್ನಲಾಗಿದೆ.