ಪುತ್ತೂರು : ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ‘ಸಾಂದೀಪನಿ ಪ್ರಶಸ್ತಿ’ ಪ್ರದಾನ ಸಮಾರಂಭವು ಕಲ್ಲಾರೆಯ ಗೋಕುಲ ನಿವಾಸದಲ್ಲಿ ನಡೆಯಿತು.
ಹಿರಿಯ ಶಿಕ್ಷಕರು, ಸಾಹಿತಿ ಹಾಗೂ ಹಲವಾರು ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಎಸ್.ಜಿ ಕೃಷ್ಣರನ್ನು ಅವರ ಸ್ವಗೃಹದಲ್ಲಿ ಸಾಂದೀಪನಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮವು ದುರ್ಗಾ ಗಣೇಶ್ ಇವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್ಟ ವಹಿಸಿದ್ದರು. ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಗಣರಾಜ ಕುಂಬ್ಳೆ ಅಭಿನಂದನಾ ಭಾಷಣ ಮಾಡಿದರು.
ಪ್ರತಿಷ್ಠಾನದ ಕಾರ್ಯದರ್ಶಿ ಅಮೃತ ಕೃಷ್ಣ ಸ್ವಾಗತಿಸಿ, ನೇತ್ರ ವಂದಿಸಿದರು. ರಾಘವೇಂದ್ರ ಪ್ರಭು ಪ್ರಶಸ್ತಿ ಪತ್ರ ವಾಚಿಸಿದರು. ಎಸ್ ಕುಸುಮಾವತಿ, ದ್ವಾರಕಾ ಪ್ರತಿಷ್ಠಾನದ ಸದಸ್ಯರಾದ ಅಶ್ವಿನಿ, ಅಮೃತ ಶ್ಯಾನುಭಾಗ್, ಮತ್ತಿತರರು ಉಪಸ್ಥಿತರಿದ್ದರು. ದಯಾನಂದ ಕಾರ್ಯಕ್ರಮ ನಿರೂಪಿಸಿದರು.