Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಭಕ್ತಾಧಿಗಳ ಸಭೆ..!!

    ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಭಕ್ತಾಧಿಗಳ ಸಭೆ..!!

    ನೆಲ್ಯಾಡಿ: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಮೃತ್ಯು…!!!

    ನೆಲ್ಯಾಡಿ: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಮೃತ್ಯು…!!!

    ಬಂಟ್ವಾಳದಲ್ಲಿ ನಾರಾಯಣ ಗುರು ಮಂದಿರ ಲೋಕಾರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ..!!

    ಬಂಟ್ವಾಳದಲ್ಲಿ ನಾರಾಯಣ ಗುರು ಮಂದಿರ ಲೋಕಾರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ..!!

    ನಿಂತಿದ್ದ ಕಂಟೈನರ್‌ಗೆ ಕಾರು ಢಿಕ್ಕಿ- ತಾಯಿ, ಮಗಳು ಸಾವು; ನಾಲ್ವರಿಗೆ ಗಂಭೀರ ಗಾಯ…!!

    ನಿಂತಿದ್ದ ಕಂಟೈನರ್‌ಗೆ ಕಾರು ಢಿಕ್ಕಿ- ತಾಯಿ, ಮಗಳು ಸಾವು; ನಾಲ್ವರಿಗೆ ಗಂಭೀರ ಗಾಯ…!!

    ಪುತ್ತೂರು: ಹವ್ಯಾಕ ಭವನದ ತಡೆಗೋಡೆ ಕುಸಿತ..!!!

    ಪುತ್ತೂರು: ಹವ್ಯಾಕ ಭವನದ ತಡೆಗೋಡೆ ಕುಸಿತ..!!!

    ಬೆಳ್ತಂಗಡಿ: ಬೈಕ್ ಅಪಘಾತ : ವಿದ್ಯಾರ್ಥಿ ಸಾವು : ಪುತ್ತೂರಿನ ಯುವಕ ಗಂಭೀರ..!!

    ಬೆಳ್ತಂಗಡಿ: ಬೈಕ್ ಅಪಘಾತ : ವಿದ್ಯಾರ್ಥಿ ಸಾವು : ಪುತ್ತೂರಿನ ಯುವಕ ಗಂಭೀರ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಪುತ್ತೂರು

ಪುತ್ತೂರು : ಕೋವಿಡ್ ನಿರ್ವಹಣಾ ಕರ್ತವ್ಯದಲ್ಲಿ ಇಲಾಖಾಧಿಕಾರಿಗಳು ವಿಫಲ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗಂಭೀರ ಆರೋಪ

June 10, 2021
in ಪುತ್ತೂರು
0
ಪುತ್ತೂರು : ಕೋವಿಡ್ ನಿರ್ವಹಣಾ ಕರ್ತವ್ಯದಲ್ಲಿ ಇಲಾಖಾಧಿಕಾರಿಗಳು ವಿಫಲ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗಂಭೀರ ಆರೋಪ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ಸರಕಾರಿ ಆಸ್ಪತ್ರೆಯಲ್ಲಿ ತೆರೆದಿರುವ ಕೋವಿಡ್ -19ರ ಸ್ವ್ಯಾಬ್ ಪರೀಕ್ಷಾ ಕೇಂದ್ರದಲ್ಲಿ ಡಾಟಾ ಎಂಟ್ರಿ ನಡೆಸಲು ಒಂದೊಂದು ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲು ಇಲಾಖೆಗಳಿಗೆ ಸೂಚನೆ ನೀಡಿದ್ದರೂ ಅದನ್ನು ಪರಿಣಾಮಕಾರಿಯಾಗಿ ಯಾರೂ ಮಾಡಿಲ್ಲ. ಕೋವಿಡ್ ನಿರ್ವಹಣಾ ಕರ್ತವ್ಯದಲ್ಲಿ ಇಲಾಖಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ತಾ.ಪಂ ಕಾರ್ಯನಿರ್ವಹಣಾಧಿಕಾರಿ ಗಂಭೀರ ಆರೋಪವನ್ನು ಮಾಡಿದರು.ಇಲಾಖಾಧಿಕಾರಿಗಳನ್ನು ತರಾಟೆಗೆತ್ತಿಕೊಂಡು ಕೊನೆಗೆ ಸಭೆಯಿಂದಲೇ ಹೊರಗೆ ಹೋದ ಘಟನೆ ಜೂ.10ರಂದು ನಡೆಯಿತು.

Advertisement
Advertisement
Advertisement

ಜೂ.10ರಂದು ತಾ.ಪಂ ಕಿರು ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಕೋವಿಡ್ ನಿರ್ವಹಣೆ ಕುರಿತು ಮಾತನಾಡಿದ ಅವರು ಕೋವಿಡ್ ಆರಂಭಗೊಂಡಾಗಿನಿಂದ ಸಚಿವಾಲಯ ಸೇರಿದಂತೆ ರಾಜ್ಯ ಮಟ್ಟದ ಕಚೇರಿಗಳಲ್ಲಿ ಮತ್ತು ಜಿಲ್ಲೆಗಳ ಅತ್ಯಗತ್ಯ ಸೇವೆಗಳನ್ನು ಒದಗಿಸುತ್ತಿರುವ ಇಲಾಖೆಗಳ ಅಧಿಕಾರಿ/ ನೌಕರರು ಕೇಂದ್ರಸ್ಥಾನದಲ್ಲಿ ಲಭ್ಯವಿದ್ದು, ಕೋವಿಡ್ -19 ಕರ್ತವ್ಯಕ್ಕಾಗಿ ನಿಯೋಜಿಸಿದ್ದಲ್ಲಿ ತಪ್ಪದೆ ಹಾಜರಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ಸರಕಾರದ ಸುತ್ತೋಲೆ ಇದ್ದರೂ ತಾಲೂಕಿನ ಇಲಾಖಾಧಿಕಾರಿಗಳು ತಮ್ಮ ಸಿಬ್ಬಂದಿಗಳನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸದಿರುವುದು ಭಾರಿ ಬೇಸರ ತಂದಿದೆ. ಸರಕಾರಿ ಆಸ್ಪತ್ರೆಯಲ್ಲಿ ತೆರೆದಿರುವ ಕೋವಿಡ್ -19 ಪರೀಕ್ಷಾ ಕೇಂದ್ರದಲ್ಲಿ ಡಾಟಾ ಎಂಟ್ರಿ ನಡೆಸಲು ವಿವಿಧ ಇಲಾಖೆಗಳ ಸಿಬ್ಬಂದಿಗಳನ್ನು ನಿಯೋಜಿಸಲು ಸಹಾಯಕ ಆಯುಕ್ತರು ನೀಡಿದ ಸೂಚನೆಯಂತೆ ಇಲಾಖಾ ಸಿಬ್ಬಂದಿಗಳನ್ನು ಡಾಟಾ ಎಂಟ್ರಿ ನಡೆಸಲು ನಿಯೋಜಿಸಿ ಆದೇಶಿಸಲಾಗಿತ್ತು. ಕಾಯ್ದಿರಿಸಿದ ಸಿಬ್ಬಂದಿಗಳು ಯಾವುದೇ ಸಂದರ್ಭದಲ್ಲಿ ಲಭ್ಯವಿರುವಂತೆ ಇಲಾಖಾ ಮುಖ್ಯಸ್ಥರು ನಿಯೋಜಿತ ಸಿಬ್ಬಂದಿಗಳಿಗೆ ಸೂಚಿಸಿಬೇಕೆಂದು ತಿಳಿಸಲಾಗಿತ್ತು. ಆದರೆ ನಿಮ್ಮ ಇಲಾಖೆಯಿಂದ ಯಾರೂ ಒಬ್ಬ ಸಿಬ್ಬಂದಿಯೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಆಸ್ಪತ್ರೆಯಿಂದ ಯಾವಾಗಾಲೂ ನನಗೆ ಪೋನ್ ಮಾಡಿ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ನಾನೇನು ಉತ್ತರ ಕೊಡಬೇಕು ಎಂದು ಇಲಾಖಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನನಗೂ ಬೇರೆ ಕೆಲಸ ಇದೆ:
ತಾಲೂಕಿನ 41 ಗ್ರಾ.ಪಂ ರಜೆಯ ದಿವಸವೂ ಕರ್ತವ್ಯದಲ್ಲಿದೆ. ನಿಮ್ಮ ಇಲಾಖೆಗೆ ಈ ಕೆಲಸ ಯಾಕೆ ಆಗುವುದಿಲ್ಲ ಎಂದ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರು ನನಗೂ ಬೇರೆ ಕೆಲಸ ಇದೆ. ಆದರೂ ಹೆಚ್ಚುವರಿ ಕೆಲಸ ಮಾಡಲೇ ಬೇಕಾಗಿದೆ. ಆದರೆ ಅದನ್ನೇ ನಿಮಗೆ ಯಾಕೆ ಮಾಡಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ನೀವು ಯಾರಿಗೆ ಬೇಕಾದರೂ ದೂರು ಕೊಡಿ. ನಾನು ಇಲ್ಲಿಂದ ಯಾವುದೇ ಬಿಲ್ ಪಾಸ್ ಮಾಡುವುದಿಲ್ಲ. ಚುನಾವಣೆ ಡ್ಯೂಟಿ ಆದರೆ ಜಿಲ್ಲಾಧಿಕಾರಿಯವರ ಭಯದಿಂದ ಬೆಳಗ್ಗೆ ಎಲ್ಲರು ಬರುತ್ತೀರಿ. ಆದರೆ ಈ ಪರಿಸ್ಥಿತಿಯಲ್ಲಿ ನನ್ನ ಆದೇಶಕ್ಕೆ ನಾನೇ ನಿಮ್ಮಲ್ಲಿ ವಿನಂತಿ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಏನಿದ್ದರೂ ಮುಂದೆ ನಿಮ್ಮ ವರದಿಯನ್ನು ಸಿಇಒ, ಜಿಲ್ಲಾಧಿಕಾರಿಗಳಿಗೆ ಕಳುಹಿಸಿ ಎಂದರು.

Advertisement

ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್, ಸಿಡಿಪಿಒ ಶ್ರೀಲತಾ, ಸಹಾಯಕ ಕೃಷಿ ನಿದೇರ್ಶಕ ನಾರಾಯಣ ಶೆಟ್ಟಿ, ತೋಟಗಾರಿಕಾ ಇಲಾಖೆ ನಿರ್ದೇಶಕಿ ರೇಖಾ, ಪಶುಸಂಗೋಪನಾ ವೈದ್ಯಾಧಿಕಾರಿ ಡಾ.ಪ್ರಸನ್ನ ಹೆಬ್ಬಾರ್, ಸಾಮಾಜಿಕ ಅರಣ್ಯಾಧಿಕಾರಿ ವಿದ್ಯಾರಾಣಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಇಲಾಖೆಗಿರುವುದು ಶುಕ್ರವಾರದ ಡ್ಯೂಟಿ:
ಸಿಡಿಪಿಒ ಶ್ರೀಲತಾ ಅವರು ಮಾತನಾಡಿ ಅಂಗನವಾಡಿ ಕಾರ್ಯಕರ್ತರು, ಸುಫರ್‌ವೈಸರ್ ಪ್ರಂಟ್‌ಲೈನ್‌ನಲ್ಲಿ ಕೆಲಸ ಮಾಡುತ್ತಾರೆ. ಆದರೆ ಈ ವಿಚಾರದಲ್ಲಿ ನನಗೆ ಬಂದ ಲೀಸ್ಟ್‌ನಲ್ಲಿ ನಮ್ಮ ಇಲಾಖೆಯಿಂದ ಸಿಬ್ಬಂದಿ ಶುಕ್ರವಾರಕ್ಕೆ ಕರ್ತವ್ಯ ಹಾಜರಾಗಲಿದೆ. ಇನ್ನೂ ಡ್ಯೂಟಿ ಸರದಿ ಬಂದಿಲ್ಲ. ಇನ್ನೊಂದು ವಿಚಾರದಲ್ಲಿ ನಮ್ಮ ಇಲಾಖೆಯಿಂದ ಒಬ್ಬರು ಬಾಣಂತಿ ರಜೆ, ಇನ್ನೊಬ್ಬರು ಡೆಂಗ್ಯೂ ಸೇರಿದಂತೆ ಮೂರು ಮಂದಿ ರಜೆಯಲ್ಲಿದ್ದಾರೆ. ಸದ್ಯ ಒಬ್ಬರೇ ಸಿಬ್ಬಂದಿ ಇರೋದು. ಇಂತಹ ಸಂದರ್ಭದಲ್ಲಿ ನನಗೂ ಮಾಹಿತಿ ನೀಡಿದೆ ಸಿಬ್ಬಂದಿಯನ್ನು ಡ್ಯೂಟಿಗೆ ಹಾಕುವುದು ಸರಿಯಲ್ಲ. ಇಲ್ಲಿ ಮಿಸ್ ಕಮ್ಯೂನಿಕೇಶನ್ ಆಗಿದೆ ಎಂದರು.

ಡ್ಯೂಟಿ ಮಾಡಬೇಕು, ಆದರೆ ಪ್ರೊಸಿಜರ್ ತಪ್ಪಿದೆ
ವಿಪತ್ತು ಕಾಯ್ದೆ ಜಾರಿಯಲ್ಲಿರುವಾಗ ಯಾರೂ ಮಾತನಾಡುವ ಹಾಗೆ ಇಲ್ಲ. ಎಲ್ಲರೂ ಕೆಲಸ ಮಾಡಲೇ ಬೇಕು. ಇದು ನಮ್ಮ ಡ್ಯೂಟಿ. ಆದರೆ ಈ ವಿಚಾರ ನಮ್ಮ ಗಮಕ್ಕೆ ಬಂದಿಲ್ಲ. ಪೋನ್ ಮಾಡಿ ನಿಮ್ಮ ಕಾರ್ಯಕ್ರಮದಲ್ಲಿ ಹಾಕಿಕೊಂಡಿರುವ ಕುರಿತು ಕೇಳಿಕೊಂಡಿಲ್ಲ. ನಮ್ಮಲ್ಲಿಂದ ಡ್ಯೂಟಿಗೆ ಹಾಕಿ ಮೂರಲ್ಲದಿದ್ದರೂ ಐವರು ಸಿಬ್ಬಂದಿಯನ್ನು ನಾವು ಕೊಡಲು ಸಿದ್ದ. ಸಿಬ್ಬಂದಿಯನ್ನು ಕಂಟ್ರೋಲ್‌ನಲ್ಲಿ ಇಡಲು ನಮಗೂ ಗೊತ್ತಿದೆ ಎಂದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ನಮ್ಮಲ್ಲಿಂದ 2೦೦ ಶಿಕ್ಷಕರನ್ನು ನಾವು ಕೊಟ್ಟಿದ್ದೇವೆ. ರೈಲ್ವೇ ನಿಲ್ದಾಣದಲ್ಲೂ ನಮ್ಮ ಶಿಕ್ಷಕರು ಕೋವಿಡ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ನಿರ್ವಹಣೆಗೆ ನಮಗೆ 5೦ ಜನ ಸಿಬ್ಬಂದಿ ಬೇಕು. ಇಲಾಖೆಯಿಂದ ಎಲ್ಲರು ತಲಾ ಮೂರರಂತೆ ಸಿಬ್ಬಂದಿ ಕೊಡಿ ಎಂದು ಹೇಳಿ. ಇಂತಹ ಸಂದರ್ಭದಲ್ಲಿ ಕೊಡುವ ಜವಾಬ್ದಾರಿ ನಮ್ಮದು ಎಂದರು.

Advertisement
Advertisement
Previous Post

ಕರಾವಳಿ ಜಿಲ್ಲೆಗಳಲ್ಲಿ ಜೂ.10 ರಿಂದ 12 ರವರೆಗೆ ಭಾರೀ ಮಳೆ ಸಾಧ್ಯತೆ:; ಎಲ್ಲೋ ಅಲರ್ಟ್ ಘೋಷಣೆ

Next Post

ಇಂದು ಅಮಿತ್ ಶಾ ಭೇಟಿ, ನಾಳೆ ಮೋದಿ ಜೊತೆ ಚರ್ಚೆ; ಉತ್ತರ ಪ್ರದೇಶದಲ್ಲಿ ಏನಾಗ್ತಿದೆ..?

OtherNews

ನೆಲ್ಯಾಡಿ: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಮೃತ್ಯು…!!!
Featured

ನೆಲ್ಯಾಡಿ: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಮೃತ್ಯು…!!!

March 29, 2026
ಪುತ್ತೂರು: ಹವ್ಯಾಕ ಭವನದ ತಡೆಗೋಡೆ ಕುಸಿತ..!!!
Featured

ಪುತ್ತೂರು: ಹವ್ಯಾಕ ಭವನದ ತಡೆಗೋಡೆ ಕುಸಿತ..!!!

March 29, 2026
ಬೆಳ್ತಂಗಡಿ: ಬೈಕ್ ಅಪಘಾತ : ವಿದ್ಯಾರ್ಥಿ ಸಾವು : ಪುತ್ತೂರಿನ ಯುವಕ ಗಂಭೀರ..!!
Featured

ಬೆಳ್ತಂಗಡಿ: ಬೈಕ್ ಅಪಘಾತ : ವಿದ್ಯಾರ್ಥಿ ಸಾವು : ಪುತ್ತೂರಿನ ಯುವಕ ಗಂಭೀರ..!!

March 29, 2026
ಪುತ್ತೂರು: ರೈಲ್ವೇ ಕಾಂಟ್ರಾಕ್ಟ‌ರ್ ರಾಮಚಂದ್ರ ನಿಧನ…!!!
Featured

ಪುತ್ತೂರು: ರೈಲ್ವೇ ಕಾಂಟ್ರಾಕ್ಟ‌ರ್ ರಾಮಚಂದ್ರ ನಿಧನ…!!!

March 29, 2026
ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಫಾರ್ಚೂನರ್ ಕಾರು..!!
Featured

ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಫಾರ್ಚೂನರ್ ಕಾರು..!!

March 26, 2026
Featured

ನೂತನ ಮಾಣಿ ಪೊಲೀಸ್ ಠಾಣೆಗೆ 13 ಗ್ರಾಮಗಳ ವ್ಯಾಪ್ತಿ ನಿಗದಿ..!!!

March 26, 2026

Leave a Reply Cancel reply

Your email address will not be published. Required fields are marked *

Recent News

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಭಕ್ತಾಧಿಗಳ ಸಭೆ..!!

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ಭಕ್ತಾಧಿಗಳ ಸಭೆ..!!

March 29, 2026
ನೆಲ್ಯಾಡಿ: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಮೃತ್ಯು…!!!

ನೆಲ್ಯಾಡಿ: ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಮೃತ್ಯು…!!!

March 29, 2026
ಬಂಟ್ವಾಳದಲ್ಲಿ ನಾರಾಯಣ ಗುರು ಮಂದಿರ ಲೋಕಾರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ..!!

ಬಂಟ್ವಾಳದಲ್ಲಿ ನಾರಾಯಣ ಗುರು ಮಂದಿರ ಲೋಕಾರ್ಪಣೆ: ಆಮಂತ್ರಣ ಪತ್ರಿಕೆ ಬಿಡುಗಡೆ..!!

March 29, 2026
ನಿಂತಿದ್ದ ಕಂಟೈನರ್‌ಗೆ ಕಾರು ಢಿಕ್ಕಿ- ತಾಯಿ, ಮಗಳು ಸಾವು; ನಾಲ್ವರಿಗೆ ಗಂಭೀರ ಗಾಯ…!!

ನಿಂತಿದ್ದ ಕಂಟೈನರ್‌ಗೆ ಕಾರು ಢಿಕ್ಕಿ- ತಾಯಿ, ಮಗಳು ಸಾವು; ನಾಲ್ವರಿಗೆ ಗಂಭೀರ ಗಾಯ…!!

March 29, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page