ಮಂಗಳೂರು : ಜೂನ್ 10 ರಿಂದ 12 ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಮುಂದಿನ ಎರಡು ದಿನಗಳವರೆಗೆ ಎಲ್ಲೋ, ಆರೆಂಜ್ ಮತ್ತು ರೆಡ್ ಅಲರ್ಟ್ ಘೋಷಿಸಲಾಗಿದೆ.
ಮಾಹಿತಿಯ ಪ್ರಕಾರ ಕರಾವಳಿ ಜಿಲ್ಲೆಗಳಲ್ಲಿ ಜೂನ್ 10 ರಿಂದ ಒಂದು ವಾರದವರೆಗೆ ಸಾಕಷ್ಟು ಪ್ರಮಾಣದ ಮಳೆಯಾಗಲಿದೆ .
ಮಾನ್ಸೂನ್ ಕರಾವಳಿ ಜಿಲ್ಲೆಗಳಿಗೆ ಪ್ರವೇಶಿಸಿ ಸುಮಾರು ಒಂದು ವಾರವಾದರೂ, ನಿರೀಕ್ಷೆಯಂತೆ ಮಳೆ ಸುರಿಯಲಿಲ್ಲ. ಈಗ ಹವಾಮಾನ ಇಲಾಖೆ ಜೂನ್ 10 ರಿಂದ 12 ರವರೆಗೆ ಎಲ್ಲೋ ಅಲರ್ಟ್, ಜೂನ್ 13 ರಂದು ಆರೆಂಜ್ ಮತ್ತು ಜೂನ್ 14 ರಂದು ರೆಡ್ ಅಲರ್ಟ್ ಘೋಷಿಸಿದೆ.