ನಿಡ್ಪಳ್ಳಿ : ಮಾಯಿಲಕೋಟೆ ನಿವಾಸಿ ನಾರಾಯಣ ಭಟ್ (85) ಕೋವಿಡ್ ನಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.
ಮೃತರ ಅಂತ್ಯಸಂಸ್ಕಾರವನ್ನು ಶಾಸಕರ ವಾರ್ ರೂಮ್ ನೇತೃತ್ವದಲ್ಲಿ ನೆರವೇರಿಸಲಾಯಿತು.ವಾರ್ ರೂಮ್ ನ ಪಿ.ಜಿ ಜಗನ್ನಿವಾಸ್ ರಾವ್, ಕಿರಣಶಂಕರ ಮಲ್ಯ,ರಾಮಚಂದ್ರ ಘಾಟೆ,ರಾಧಾ ಕೃಷ್ಣ ಬೋರ್ಕರ್ ನೇತೃತ್ವದಲ್ಲಿ ಮೃತರ ಸಂಬಂಧಿಕರು ಪಿ.ಪಿ.ಇ ಕಿಟ್ ಧರಿಸಿ ಅಂತಿಮ ವಿಧಿ ವಿಧಾನವನ್ನು ನೆರವೇರಿಸಿದರು.