ಕೋವಿಡ್ ಸಂದರ್ಭದಲ್ಲಿ ಹಲವು ಕುಟುಂಬಗಳು ಚಿಂತಾಜನಕ ಪರಿಸ್ಥಿತಿಯಲ್ಲಿವೆ..ಇಂತಹ ಸಂದರ್ಭದಲ್ಲಿ ಹಲವರ ನೆರವು ಬಡತನದ ಬೇಗೆಯಲ್ಲಿರುವವರ ಪಾಲಿಗೆ ಆಸರೆಯಾಗಿದೆ.
ಅದರಂತೆ ಪುತ್ತೂರಿನ ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಚಾಲಕರಾಗಿರುವ ಸಮಾಜ ಸೇವಕರೂ ಆಗಿರುವ ದಯಾನಂದ್ ಅವರು ನರಿಮೊಗರು ಗ್ರಾಮದ ಕೆಂಚಿಮಾರು, ಮುಕ್ವೆ, ಮುಗೇರಡ್ಕ ಹಾಗೂ ಕೆಮ್ಮಿಂಜೆ ಗ್ರಾಮದ ಪುತ್ರಮೂಲೆ, ನೈತಾಡಿ ಪ್ರದೇಶದ ಕಡು ಬಡ ಕುಟುಂಬಕ್ಕೆ ಜೂ.14ರಂದು ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿದರು.