ಪುತ್ತೂರು : ಅಂಗನವಾಡಿ ಕೇಂದ್ರದಲ್ಲಿ ನಿವೃತ್ತಿ ಹೊಂದಿದ ಕಾರ್ಯಕರ್ತೆ ಶ್ರೀಮತಿ ಐರಿನ್ ಮಿನೇಜಸ್ ರವರಿಗೆ ಬೀಳ್ಕೊಡುವ ಕಾರ್ಯಕ್ರಮ ಜೂ.14 ರಂದು ಸಂಜಯ ನಗರ ಅಂಗನವಾಡಿ ಕೇಂದ್ರ ದಲ್ಲಿ ನಡೆಯಿತು.
ಇದರೊಂದಿಗೆ ವಿದೇಶದಲ್ಲಿ ಉದ್ಯೋಗದಲ್ಲಿರುವ ಶ್ರೀಮತಿ ಚಂದ್ರಕಲಾ ಸುಧಾಕರ್ ಮತ್ತು ಮನೆಯವರು ಪುತ್ತೂರು ಕಸಬಾ ವಲಯದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರನ್ನು ಕೋವಿಡ್ 19 ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಿಸುವುದಕ್ಕಾಗಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅವರು ವಿದೇಶದಲ್ಲಿರುವ ಕಾರಣ ಅವರ ಪರವಾಗಿ ಮಾಜಿ ಸೈನಿಕರ ಪತ್ನಿ ಶ್ರೀಮತಿ ಪುಷ್ಪಲತಾ ಪರಮೇಶ್ವರ್ ರವರು ಹೂ ಹಾಗೂ ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಸಬಾ ವಲಯದ ಅಧ್ಯಕ್ಷೆ ಕಮಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಜೊತೆಗೆ ಆರೋಗ್ಯ ಇಲಾಖೆಯ ಪ್ರತಿಯೊಂದು ಕೆಲಸವನ್ನು ನಿರ್ವಹಿಸಿಕೊಂಡು ಅದರ ಜೊತೆಗೆ ಕೋವಿಡ್ 19 ಕಾರ್ಯದಲ್ಲಿ ಪ್ರತಿ ಅಂಗನವಾಡಿ ಕಾರ್ಯಕರ್ತೆಯರು ಪ್ರತೀ ಅಂಗನವಾಡಿ ವ್ಯಾಪ್ತಿಯ ಪ್ರತಿ ಮನೆಗಳಿಗೆ ಭೇಟಿ ನೀಡಿ ಕೋವಿಡ್ ಕಾರ್ಯ ಪಡೆಯೊಂದಿಗೆ ಸಂಪೂರ್ಣವಾಗಿ ಕರ್ತವ್ಯ ನಿರ್ವಹಿಸಿರುತ್ತೇವೆ.ಪುತ್ತೂರು ನಗರಸಭೆಯ ಎಲ್ಲಾ ಸದಸ್ಯರು ಹಾಗೂ ನಗರ ಸಭೆಯ ಸಿಬ್ಬಂದಿಗಳ ಜೊತೆಗೂಡಿ ಪ್ರತಿಯೊಂದು ಮನೆ ಸಮೀಕ್ಷೆ ಮಾಡಿ ದಿನಂಪ್ರತಿ ವರದಿ ನೀಡಿ. ಅದಲ್ಲದೇ ಕೋವಿಡ್ ಸೋಂಕಿತರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಅವರಿಗೆ ಬೇಕಾದ ಸೌಲಭ್ಯವನ್ನು ಒದಗಿಸುವಂತೆ ವಾರ್ಡ್ ಸದಸ್ಯರಿಗೆ ತಿಳಿಸಿ ವಾರ್ ರೂಮ್ ಮುಖಾಂತರ ದಿನ ಬಳಕೆಯ ಕಿಟ್ ಅನ್ನು ಕೊಟ್ಟಿದ್ದು, ಇನ್ನು ಮುಂದಿನ ದಿನಗಳಲ್ಲಿ ಕೋವಿಡ್ 19 ಕಾರ್ಯಪಡೆಯೊಂದಿಗೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತೇವೆ ಇದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರಾದ ಜಯಲತ ಪ್ರಾರ್ಥಿಸಿದರು ಯಶೋಧಾ ಸ್ವಾಗತಿಸಿದರು,ಸುಮಿತ್ರಾ ಬಪ್ಪಳಿಗೆ ವಂದಿಸಿದರು ಹಾಗೂ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು.