ಮುಂಡೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಶ್ರಯದಲ್ಲಿ ಈಗಾಗಲೇ ಆರಂಭಗೊಂಡಿರುವ ವಿನೂತನ ಕಾರ್ಯಕ್ರಮ “ಭತ್ತ ಬೆಳೆಯೋಣ” ಕಾರ್ಯಕ್ರಮದ ಪೂರ್ವಭಾವಿ ಸಭೆ ಕುಕ್ಕಿನಡ್ಕ ದೇವಸ್ಥಾನದಲ್ಲಿ ನಡೆಯಿತು.
ಊರಿನವರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಯಾವ ರೀತಿಯಲ್ಲಿ ಮಾಡುವುದೆಂದು ಚರ್ಚೆ ಮಾಡಲಾಯಿತು. ಸುಮಾರು 50 ಮುಡಿ ಗದ್ದೆ ನಾಟಿ ಮಾಡುವ ಗದ್ದೆಯನ್ನು ಗುರುತಿಸಿದ್ದು ಅವರನ್ನು ಸಂಪರ್ಕ ಮಾಡಿ ಗದ್ದೆ ಕೃಷಿ ಮಾಡುವ ಬಗ್ಗೆ ಮನವರಿಕೆ ಮಾಡಲು ನಿಶ್ಚಯಿಸಲಾಯಿತು. ಸ್ಥಳೀಯ ಪಂಚಾಯತ್ ಮತ್ತು ಸಂಘ ಸಂಸ್ಥೆ ಗಳನ್ನು ಸಂಪರ್ಕ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ದೇವಸ್ಥಾನದಲ್ಲಿ ಮಾಡುವ ಬಗ್ಗೆ ಮುಂದಿನ ಸಭೆಯಲ್ಲಿ ನಿಶ್ಚಯ ಮಾಡುವುದಾಗಿ ನಿರ್ಣಯ ಮಾಡಲಾಯಿತು. ಗದ್ದೆ ನಾಟಿ ಮಾಡಲು ಊರವರ ಸಮಿತಿ ಯೊಂದನ್ನು ರಚಿಸಲಾಗಿದ್ದು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿ ಶೆಟ್ಟಿ ಯವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು. ಕಾರ್ಯದರ್ಶಿಯಾಗಿ ಬಾಲಕೃಷ್ಣ ಕಣ್ಣರಾಯ ರವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.ತಕ್ಷಣ ಕಾರ್ಯಪ್ರವೃತರಾಗುವಂತೆ ನಿರ್ಧರಿಸಲಾಯಿತು.
ನೇಜಿ ಹಾಕುವ ಮತ್ತು ಕೊಯ್ಯುವ ಜವಾಬ್ದಾರಿಯನ್ನು ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ರಜನಿ ಗೌಡ ವಹಿಸಿಕೊಂಡರು.ಗದ್ದೆ ಉಳುವ ಜವಾಬ್ದಾರಿ ಪುಟ್ಟಣ್ಣ ಗೌಡ, ವಿಶ್ವನಾಥ ಮತ್ತು ಜಯಾನಂದ ವಹಿಸಿಕೊಂಡರು.
ಸಭೆಯಲ್ಲಿ ಗದ್ದೆ ಬೆಳೆಯೋಣ ಸಮಿತಿ ಪ್ರಮುಖರಾದ ಮುರಳಿ ಭಟ್ ಬಂಗಾರಡ್ಕ. ಬೂಡಿಯಾರ್ ರಾಧಾಕೃಷ್ಣ ರೈ. ಮಹಾಲಿಂಗೇಶ್ವರ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು, ಪ್ರಮುಖರಾದ ಅರುಣ್ ಪುತ್ತಿಲ,ಉಮೇಶ ಗುತ್ತಿನಪಾಲು,ಸುಧೀರ್ ಶೆಟ್ಟಿ, ರಾಮಣ್ಣ ಗೌಡ,ನಾಗೇಶ್ ಕುದ್ರೆತ್ತಾಯ, ಪ್ರಸಾದ್ ಬೈಪಾಡಿತ್ತಾಯ ಮತ್ತಿತರರು ಉಪಸ್ಥಿತರಿದ್ದರು. ಪಟ್ಟೆ ಸದಾಶಿವ ಶೆಟ್ಟಿ ಸ್ವಾಗತಿಸಿ,ವಂದಿಸಿದರು.