ಪುತ್ತೂರು : ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆಕೊಂಡು ಹೋದ ಕಾರಣ ರಸ್ತೆಯಲ್ಲಿ ಬಿದ್ದು
ಹೊರಳಾಡುತ್ತಿದ್ದ ಹಸುವನ್ನು ಹಿಂದೂ ಜಾಗರಣ ವೇದಿಕೆ ಪುರುಷರಕಟ್ಟೆಯ ಕಾರ್ಯಕರ್ತರು ವಾಹನದಲ್ಲಿ ಪುತ್ತೂರಿನ ಗೋವು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ ಘಟನೆ ಜೂ.14 ರಂದು ನಡೆಯಿತು.
ಪಶು ಇಲಾಖೆಯ ವೈದ್ಯ ಪುಂಡರೀಕಾಕ್ಷ ಚಿಕಿತ್ಸೆ ನೀಡಿದ್ದು, ಚಿಕಿತ್ಸೆಯ ನಂತರ ಹಸುವನ್ನು ಕಾರ್ಯಕರ್ತರ ಮನೆಯಲ್ಲೇ ಇರಿಸಿ ಹಾರೈಕೆ ಮಾಡಲಾಗುತ್ತಿದ್ದೆ ಎಂದು ತಿಳಿದು ಬಂದಿದೆ.
ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಅವಿನಾಶ್ ಪುರುಷರಕಟ್ಟೆ,ಗಣೇಶ್ ಮುಕ್ವೆ,ಅವಿನಾಶ್ ಅಭಿ ಪುರುಷರ ಕಟ್ಟೆ,ರಾಜೇಶ್ ಕೆಡ್ಕರ್ ಹಸುವನ್ನು ಚಿಕಿತ್ಸೆ ಕೊಡಿಸುವಲ್ಲಿ ಸಹಕರಿಸಿದರು.