ಕಾಣಿಯೂರು: ಕಡಬ ತಾಲೂಕು ಕುದ್ಮಾರು ಗ್ರಾಮದಲ್ಲಿ ಮರ ಕಡಿಯುವ ವೇಳೆ ಗೆಲ್ಲು ಬಿದ್ದು ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಕ್ಯಾಮಣ ಗ್ರಾಮದ ಅಗಳಿ ನಿವಾಸಿ ಮೋಹನ ಎ.ಕೆ. (55ವ.) ಮೃತಪಟ್ಟವರು.
ಘಟನೆಯ ವಿವರ: ಕುದ್ಮಾರು ಗ್ರಾಮದ ಎರ್ಮೆತ್ತಿಮಾರ್ ಬಳಿ ನಿತಿನ್ ರವರ ಮನೆಯ ಹತ್ತಿರವಿರುವ ಅಂಡಿಪುನಾರ್ ಮರವನ್ನು ಕಡಿಯುವ ಕೆಲಸದಲ್ಲಿ ಮೋಹನ ಎ.ಕೆ. ರವರು ತಮ್ಮ ಸಹ ಕೆಲಸಗಾರ ದೇವಣ್ಣರವರೊಂದಿಗೆ ತೊಡಗಿದ್ದರು.
ಮರವನ್ನು ಬುಡದಿಂದ ಕಡಿದು ಕೆಳಗೆ ಬೀಳಿಸುವ ವೇಳೆ, ಮರಕ್ಕೆ ಕಟ್ಟಿದ್ದನೈಲಾನ್ ಹಗ್ಗವನ್ನು ಎಳೆಯುತ್ತಿದ್ದ ಮೋಹನರ ಮೇಲೆ ಮರದ ಕೊಂಬೆಯೊಂದು ಆಕಸ್ಮಿಕವಾಗಿ ಬಿದ್ದಿದೆ.ಪರಿಣಾಮ ಗಂಭೀರವಾಗಿ ಗಾಯಗೊಂಡ ಮೋಹನ ಅವರನ್ನು ತಕ್ಷಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಘಟನೆ ಬಗ್ಗೆ ಮೃತರ ಪುತ್ರ ಸನತ್ ಕುಮಾರ್ ನೀಡಿದ ದೂರಿನಂತೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ವೇದಾವತಿ, ಪುತ್ರ ಸನತ್, ಪುತ್ರಿ ಪ್ರೀತಿಕಾ ಅವರನ್ನು ಆಗಲಿದ್ದಾರೆ.


























