ವಿಟ್ಲ: ಶ್ರೀವರ ಯುವಕ ಮಂಡಲ (ರಿ) ಪೂರ್ಲಪ್ಪಾಡಿ: 3 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಬಂಟ್ವಾಳ ತಾಲೂಕ್ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ 58kg ವಿಭಾಗದ ಹೊನಲು ಬೆಳಕಿನ ಮ್ಯಾಟ್ ಅಂಕಣದ ಮುಕ್ತ ಕಬಡ್ಡಿ ಪಂದ್ಯಾಟ ಶ್ರೀವರ ಟ್ರೋಫಿ 2025 ಫೆ.08 ರಂದು ಶ್ರೀವರ ವೇದಿಕೆ ಮುಂಭಾಗ ಪೂರ್ಲಪ್ಪಾಡಿ ವಿಟ್ಲ ಪಡ್ನೂರು ನಲ್ಲಿ ನಡೆಯಲಿದೆ.
ಪ್ರಥಮ 12,025 ಮತ್ತು ಶ್ರೀವರ ಟ್ರೋಫಿ , ದ್ವಿತೀಯ 8025 ಮತ್ತು ಶ್ರೀವರ ಟ್ರೋಫಿ, ತೃತೀಯ 4025 ಮತ್ತು ಶ್ರೀವರ ಟ್ರೋಫಿ, ಚತುರ್ಥ 4025 ಮತ್ತು ಶ್ರೀವರ ಟ್ರೋಫಿ ಇನ್ನು ಹಲವು ಬಹುಮಾನಗಳು ಇರಿಸಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
