ಮಂಗಳೂರು: ರಾಜ್ಯದಲ್ಲಿ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಈ ಹಿಂದೆ ಸರಕಾರ ಘೋಷಣೆ ಮಾಡಿರುವ ಹನ್ನೊಂದು ಜಿಲ್ಲೆಗಳಲ್ಲಿ ಜೂನ್ 19 ಹಾಗೂ 20ರಂದು ವೀಕೆಂಡ್ ಕರ್ಫ್ಯೂ ಜಾರಿಯಲ್ಲಿಲ್ಲ. ಬದಲಾಗಿ, ಪ್ರಸ್ತುತ ಇರುವ ಲಾಕ್ ಡೌನ್ ಸೋಮವಾರದ ತನಕ ಮುಂದುವರೆಯಲಿದೆ. ಸೋಮವಾರದ ನಂತರ ಸೋಂಕಿನ ಪ್ರಮಾಣದ ಬಗ್ಗೆ ಚರ್ಚೆ ನಡೆಸಿ ಜಿಲ್ಲಾಡಳಿತ ಮುಂದಿನ ನಿರ್ಧಾರ ಕೈಗೊಳ್ಳಲಿದೆ.
ಉಡುಪಿ ಸೇರಿದಂತೆ ಸೋಂಕಿತರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳಲ್ಲಿ ಸರಕಾರ ಲಾಕ್ ಡೌನ್ ಸಡಿಲಿಕೆಗೊಳಿಸಿ ಈ ಹಿಂದೆ ಆದೇಶ ನೀಡಿತ್ತು. ಆ ಜಿಲ್ಲೆಗಳಲ್ಲಿ ಇಂದು ರಾತ್ರಿಯಿಂದ ಸೋಮವಾರ ಬೆಳಿಗ್ಗಿನ ತನಕ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಉಳಿದ ಜಿಲ್ಲೆಗಳಲ್ಲಿ ಮುಂದಿನ ಆದೇಶದ ತನಕ ಸದ್ಯದ ಲಾಕ್ ಡೌನ್ ಮುಂದುವರೆಯಲಿದೆ.ಇನ್ನು ದ.ಕ. ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಇದೆ ಎನ್ನುವ ಬಗ್ಗೆ ಸಾಕಷ್ಟು ಸಾರ್ವಜನಿಕರಲ್ಲಿ ಗೊಂದಲಗಳಿವೆ. ಆದರೆ, ಸದ್ಯ ಯಾವುದೇ ನಿರ್ಧಾರಗಳಿಲ್ಲ. ಶನಿವಾರ ಹಾಗೂ ರವಿವಾರ ಇಲ್ಲಿಯ ತನಕ ಇರುವ ಆದೇಶದ ಪ್ರಕಾರ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯ ತನಕ ಅಗತ್ಯ ಸೇವೆಗಳು ಲಭ್ಯವಿದೆ.