ಬೆಂಗಳೂರು: ದಿವಾಕರ್ ದಾಸ್ ನೇರ್ಲಾಜೆ ಮಾಲೀಕತ್ವದ ಎಸ್‌ಎಲ್‌ವಿ ಬುಕ್ ಏಜೆನ್ಸೀಸ್ ನ 5ನೇ ಮಳಿಗೆಯು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇಂದು ಶುಭಾರಂಭಗೊಂಡಿತು.
ಎಸ್‌ಎಲ್‌ವಿ ಬುಕ್ ಏಜೆನ್ಸೀಸ್ ಈಗಾಗಲೇ ಮಂಗಳೂರು, ಮೈಸೂರು, ಚಾಮರಾಜನಗರದಲ್ಲಿ ಶೋ ರೂಮ್‌ಗಳನ್ನು ಹೊಂದಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ತನ್ನ 5 ನೇ ಶಾಖೆಯ ಉದ್ಘಾಟನೆ ಕಾರ್ಯಕ್ರಮ ಇಂದು ಕೋವಿಡ್ ನಿಯಾಮವಳಿಯನ್ನು ಪಾಲಿಸಿಕೊಂಡು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾಜರಾಜೇಶ್ವರಿ ನಗರ ವಿಧಾನ ಸಭಾ ಶಾಸಕ ಮುನಿರತ್ನ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಜಯ ಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಬಿ ಗುಣರಂಜನ್ ಶೆಟ್ಟಿ, ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಜಗದೀಶ್, ಮಾಜಿ ಕಾರ್ಪೊರೇಟರ್ ರಾಮಚಂದ್ರ,ಇಂದ್ರಪ್ರಸ್ಥ ವಿದ್ಯಾಲಯದ ಯು ಎಸ್ ನಾಯಕ್, ಲೋಕಾಯುಕ್ತ ಸರ್ಕಲ್ ಇನ್ಸ್ಪೆಕ್ಟರ್ ರಾಜೇಶ್, ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಎಂ ರಾಜಕುಮಾರ್, ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಆರ್ ಚಂದ್ರಪ್ಪ, ಜಿಲ್ಲಾಧ್ಯಕ್ಷ ಶ್ರೀನಿವಾಸ್, ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಂಚಾಲಕ ರಾಮದಾಸ್ ಶೆಟ್ಟಿ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ರವಿಪ್ರಕಾಶ್, ಸುಕೇಶ್ ಭಂಡಾರಿ, ವಸಂತ ಪೂಜಾರಿ ಉಪಸ್ಥಿತರಿದ್ದರು.